ಕಲಾವಿದರು ಕಲೆಯ ಜೊತೆ ಸಂಸ್ಕೃತಿ, ಸಂಸ್ಕಾರ ಉಳಿಸಲು ಯತ್ನಿಸಬೇಕು : ಇ. ತುಕಾರಾಂ
ಬಳ್ಳಾರಿ, 4 ಜನವರಿ (ಹಿ.ಸ.) : ಆ್ಯಂಕರ್ : ಕಲಾವಿದರು ಕಲೆಯನ್ನು ಉಳಿಸಿ - ಬೆಳೆಸುವುದರ ಜೊತೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ - ಬೆಳೆಸುವಲ್ಲಿ ಚಿಂತನೆ ನಡೆಸಬೇಕು ಎಂದು ಸಂಸದ ಇ. ತುಕಾರಾಂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂ
ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಕಲಾವಿದರು ಕಲೆಯ ಜೊತೆಯಲ್ಲಿ ಸಂಸ್ಕøತಿ ಮತ್ತು ಸಂಸ್ಕಾರ ಉಳಿಸಲು ಯತ್ನಿಸಬೇಕು ; ಇ. ತುಕಾರಾಂ


ಬಳ್ಳಾರಿ, 4 ಜನವರಿ (ಹಿ.ಸ.) :

ಆ್ಯಂಕರ್ : ಕಲಾವಿದರು ಕಲೆಯನ್ನು ಉಳಿಸಿ - ಬೆಳೆಸುವುದರ ಜೊತೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ - ಬೆಳೆಸುವಲ್ಲಿ ಚಿಂತನೆ ನಡೆಸಬೇಕು ಎಂದು ಸಂಸದ ಇ. ತುಕಾರಾಂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಪ್ರಾರಂಭವಾದ ಎರೆಡು ದಿನಗಳ `ಬಳ್ಳಾರಿ ಜಿಲ್ಲಾ ಕಲಾ ವೈಭವ - 2025' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮಗಳು ತಲೆ ತಗ್ಗಿಸುವಂತೆ ಕಲಾ ಪ್ರದರ್ಶನವಾಗಬೇಕು. ಕಲಾ ಪ್ರದರ್ಶನದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಹೊಸತನದ ಚಿಂತನೆಗಳನ್ನು ಮೂಡಿಸಬೇಕು. ಕಲಾವಿದರು ಕಲೆಯನ್ನು ಪೋಷಿಸುವಂತೆ ಸಮಾಜದ ಹಿತವನ್ನೂ ಚಿಂತಿಸಬೇಕು ಎಂದರು.

ಕಲಾವಿದರು ಸಾಮಾನ್ಯವಾಗಿ ಬಡತನದಿಂದಲೇ ಜೀವನ ನಡೆಸುತ್ತಾರೆ. ಆದರೆ, ಅವರ ಕಲೆ ಮತ್ತು ಕಲಾ ನೈಪುಣ್ಯತೆ ಅವರನ್ನು ಶ್ರೀಮಂತಗೊಳಿಸಿರುತ್ತದೆ. ಕಲಾವಿದರಿಗೆ ಸೂಕ್ತವಾದ ರೀತಿಯಲ್ಲಿ ಗೌರವಧನ, ಆರೋಗ್ಯ, ವಸತಿ, ಕುಟುಂಬದ ಭದ್ರತೆ-ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವೃದ್ಧಾಪ್ಯದ ಜೊತೆ ಪಿಂಚಣಿ ಇನ್ನಿತರೆ ಸೌಲಭ್ಯಗಳು ಸಿಗಬೇಕು ಎಂದರು.

ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ಸೌಲಭ್ಯ ವಂಚಿತ ಕಲಾವಿದರ ಪಟ್ಟಿಯನ್ನು ಸಿದ್ದಪಡಿಸಿ ಕೊಟ್ಟಲ್ಲಿ ಸಾಧ್ಯವಾದ ಸಹಾಯ -ಸಹಕಾರ ; ನೆರವು ನೀಡುವುದಾಗಿ ತಿಳಿಸಿ, ಸಂಘದ ಚಟುವಟಿಕೆಗಳಿಗಾಗಿ ವೈಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು. ಈ ಮೊತ್ತವನ್ನು ನಿಶ್ಛಿತ ಠೇವಣಿ ಇರಿಸಿ ಬರುವ ಬಡ್ಡಿಯಿಂದ ಪ್ರತೀ ವರ್ಷ ಮೂವರು ಕಲಾವಿದರಿಗೆ ಗೌರವಿಸಿ-ಅಭಿನಂದನೆ ಸಲ್ಲಿಸಬೇಕು ಎಂದರು.

ಮೇಯರ್ ಮುಲ್ಲಂಗಿ ನಂದೀಶ್ ಅವರು ಮುಖ್ಯ ಅತಿಥಿಗಳಾಗಿ, ಕಲಾವಿದರ ಪ್ರಪ್ರಥಮ ಕಲಾ ವೈಭವವು ಅತ್ಯಂತ ಯಶಸ್ವಿಯಾಗಿ ಪ್ರಾರಂಭವಾಗಿದೆ. ಭವಿಷ್ಯದಲ್ಲಿ ಕಲಾವಿದರು ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕು ಎಂದರು.

ಡಾ. ರಾಜಕುಮಾರ್ ರಸ್ತೆಯ ರಾಘವ ಕಲಮಂದಿರದಿಂದ ಆರಂಭವಾದ ಕಲಾವೈಭವ ಮೆರವಣಿಗೆಯನ್ನು ಗುತ್ತಿಗೆದಾರ ಮಸೀದಿಪುರದ ಸಿದ್ದರಾಮನಗೌಡ ಅವರು ಉದ್ಘಾಟಿಸಿದರು. ಮೆರವಣಿಗೆಯಲ್ಲಿ ತಾಷಾರಾಂಡೋಲ್, ಬಯಲಾಟ ವೇಷ, ಚೌಡಿಕಿ ವಾದನ, ಕೋಲಾಟ, ಗೊರವರ ಕುಣಿತ, ನಂದಿಧ್ವಜ, ವೀರಗಾಸೆ ಕುಣಿತ, ಬ್ಯಾಂಡ್ ಮೇಳ ಸೇರಿದಂತೆ ಹಲವಾರು ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಿಗೆಯು ಗಡಿಗೆ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ ರಸ್ತೆ, ಎಚ್.ಆರ್.ಜಿ ಸರ್ಕಲ್ ಮೂಲಕ ಸಾಗಿ ರಂಗಮಂದಿರದಲ್ಲಿ ಸಮಾರೋಪಗೊಂಡಿತು.

ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಿ, ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಿರಿಗೇರಿ ಪನ್ನರಾಜ್, ಮೀನಳ್ಳಿ ಚಂದ್ರಶೇಖರಗೌಡ, ಚಂದ್ರಶೇಖರ್, ಬಗರ್‍ಹುಕುಂ ಅಧ್ಯಕ್ಷ ಎಚ್. ತಿಮ್ಮನಗೌಡ, ಜಯಪ್ರಕಾಶ್ ಗುಪ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಉಪಾಧ್ಯಕ್ಷೆ ವೀಣಾ ಕುಮಾರಿ, ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಖಜಾಂಚಿ ಬಿ. ರಮಣಪ್ಪ, ಜಂಟಿ ಕಾರ್ಯದರ್ಶಿ ಸುಬ್ಬಣ್ಣ, ವೀರೇಶ್ ದಳವಾಯಿ ಸೇರಿ ಅನೇಕರು ಉಪಸ್ಥಿತರಿದ್ದರು.

ಹನುಮಯ್ಯ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿತು. ವಿನೋದ್ ಚೌಹಾಣ್ ಮತ್ತು ಆಲಂಭಾಷ ಕಾರ್ಯಕ್ರಮ ನಿರೂಪಿಸಿದರು.

`ಕವಿ ಕಾವ್ಯ ಕುಂಚ'

ಕವಿ ಕಾವ್ಯ ಕುಂಚ ಗಾಯನ, ವಚನ ಗಾಯನ ದಾಸವಾಣಿ ಗಾಯನ ಸುಗಮ ಸಂಗೀತ ಗಾಯನ ಕರ್ನಾಟಕ ಸಂಗೀತ ಕುಚುಪುಡಿ ಮತ್ತು ಜಾನಪದ ಗಾಯನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande