ನವದೆಹಲಿ, 2 ಜನವರಿ (ಹಿ.ಸ.) :
ಆ್ಯಂಕರ್ :
ಕಳೆದ ತಿಂಗಳು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಅನುಭವಿಸಿದ ದ್ವೀಪ ರಾಷ್ಟ್ರ ವನವಾಟುಗೆ ಭಾರತ ಸರಕಾರವು ತಕ್ಷಣಕ್ಕೆ ಐದು ಲಕ್ಷ ಅಮೆರಿಕನ್ ಡಾಲರ್ (ಸುಮಾರು 4.28 ಕೋಟಿ ರೂ.) ಪರಿಹಾರ ನೆರವು ಘೋಷಿಸಿದೆ.
ಡಿಸೆಂಬರ್ 17, 2024 ರಂದು ದಕ್ಷಿಣ ಪೆಸಿಫಿಕ್ ಮಹಾಸಾಗರದ ವನವಾಟು ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ, ಇದು ಭಾರಿ ವಿನಾಶ ಮತ್ತು ಜೀವಹಾನಿಯನ್ನು ಉಂಟುಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಅಭೂತಪೂರ್ವ ವಿಪತ್ತಿನಿಂದ ಉಂಟಾದ ನಷ್ಟ ಮತ್ತು ವಿನಾಶಕ್ಕಾಗಿ ಭಾರತ ಸರಕಾರವು ವನವಾಟು ಸರ್ಕಾರ ಮತ್ತು ಜನರಿಗೆ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದು ಮತ್ತು ಈ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಸಹಕಾರವನ್ನು ನೀಡಲು ಮುಂದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ