ಅಜ್ಮೀರ್, 4 ಜನವರಿ (ಹಿ.ಸ.) :
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಂದು ಅಜ್ಮೀರ್‌ನ ಸೂಫಿಸಂತ ಕ್ವಾಜಾ ಮೋಯಿನುದ್ದೀನ್ ಹಸನ್ ಚಿಸ್ತಿಯಲ್ಲಿ ಛಾದರ್ ಅರ್ಪಿಸಿದರು.
ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ಧಿಕಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ಬುಧವಾರದಂದು ಕ್ವಾಜಾ ಗರೀಬ್ ನವಾಜ್ ಅವರ ೮೧೩ನೇ ಉರಸ್ ಪ್ರಾರಂಭವಾಗಿದೆ. ಇದರ ಅಂಗವಾಗಿ ಛಾದರ್‌ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗುರುವಾರ ಸಂಜೆ ಸಚಿವ ಕಿರಣ್ ರಿಜಿಜು ಅವರಿಗೆ ಹಸ್ತಾಂತರಿಸಿದರು. ಅದನ್ನು ಇಂದು ಮೋದಿ ಅವರ ಪರವಾಗಿ ಸಚಿವ ಕಿರಣ್ ರಿಜಿಜು ಅವರು ಅಜ್ಮೀರ್‌ನ ದರ್ಗಾಕ್ಕೆ ಹಾಸಲು 'ಚಾದರ್' ಅರ್ಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ