ಹುಬ್ಬಳ್ಳಿ, 04 ಜನವರಿ (ಹಿ.ಸ.) :
ಆ್ಯಂಕರ್ : ಶ್ರೀಮತಿ ಬೇಲಾ ಮೀನಾ ಅವರು ಇಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ (DRM) ಅಧಿಕಾರ ಸ್ವೀಕರಿಸಿದರು. ಇವರು 1996ರಬ್ಯಾಚ್‌ನ ಭಾರತೀಯ ರೈಲ್ವೆ ಸಂಚಾರ ಸೇವೆಯ (IRTS) ಅಧಿಕಾರಿಯಾಗಿದ್ದು, 1997ರ ಸೆಪ್ಟೆಂಬರ್ 4ರಂದು ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭ ಮಾಡಿದರು.
1999 ರಿಂದ 2017ರ ವರೆಗೆ ಮುಂಬಯಿ ಕೇಂದ್ರಿತ ಪಶ್ಚಿಮ ರೈಲ್ವೆಯ (Western Railway) ವಿಭಾಗದಲ್ಲಿ ವಾಣಿಜ್ಯ (Commercial) ಹಾಗೂ ಪರಿಚಾಲನಾ (Operating) ವಿಭಾಗದಲ್ಲಿ ಒಟ್ಟು 6 ವರ್ಷ ಸೇವೆ ಸಲ್ಲಿಸಿ ಮಹತ್ತರ ಕಾರ್ಯ ಸಾಧನೆ ಮಾಡಿದ್ದಾರೆ. ಈ ವಿಭಾಗದ ಬೋರಿವೇಲಿ, ಖಾರ್ ಮತ್ತು ಮಾತುಂಗಾ ರೋಡ್ ನಿಲ್ದಾಣಗಳಿಗೆ ಅತ್ಯಾಧುನಿಕ ಸ್ಫರ್ಶ ನೀಡಿ, ಅವುಗಳ ಆಕರ್ಷಣೆ. ಸ್ವಚ್ಛತೆ ಹಾಗೂ ಸೌಂದರೀಕರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಈ ಸಾಧನೆಯನ್ನು ಗುರುತಿಸಿ ಪ್ರಧಾನ ಮಂತ್ರಿಗಳ “ಮನ್ ಕಿ ಬಾತ್ “ ಕಾರ್ಯಕ್ರಮದಲ್ಲಿ ಈ ರೈಲು ನಿಲ್ದಾಣಗಳಿಗೆ ವಿಶೇಷ ಗೌರವ ನೀಡಲಾಯಿತು.
ಡಿಜಿಟಲ್ ರೈಲ್ವೆ ಟಿಕೇಟ್ ಆಳವಡಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಉತ್ತರ ರೈಲ್ವೆ (Northern Railway) ವಿಭಾಗದಲ್ಲಿ ಕಾರ್ಯನಿರ್ವಹಿಸುವಾಗ ರೈಲು ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೇಟ್ (UTS) ಪಡೆಯುವಲ್ಲಿ ಇದ್ದ ಭೌಗೊಳಿಕ ನ್ಯೂನ್ಯತೆ ಸರಿಪಡಿಸಿ, Geo-fencing ಅಳವಡಿಸಿ ಟಿಕೇಟ್ ವಿತರಣೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಮಾಡಿದರು. ಆಧುನಿಕ QR (Quick Response)) ಆಧಾರಿತ ಎಲ್ಲ ರೀತಿಯ ಟಿಕೇಟ್ ಖರೀದಿಗೆ ಹಾಗೂ ವಿಶೇಷ ಚೇತನರಿಗೆ ಮೊಬೈಲ್ ಆಧಾರಿತ ಕಾಯ್ದಿರಿಸದ ಟಿಕೇಟ್ (UTS) ಬುಕಿಂಗ್ ಸೌಲಭ್ಯವನ್ನು ಪರಿಚಯಿಸಿದರು.
27 ವರ್ಷಗಳ ಸೇವಾ ಅನುಭವ ಹೊಂದಿರುವ ಶ್ರೀಮತಿ ಬೇಲಾ ಮೀನಾ ಅವರು ಈ ಮೊದಲು ಹಿರಿಯ ವಾಣಿಜ್ಯ ವ್ಯವಸ್ಥಾಪಕರಾಗಿ (Senior Divisional Commercial Manager) , ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ (Chief Project Manager) ಹಿರಿಯ ಟ್ರಾನ್ಸಪೋರ್ಟೆಷನ್ ವ್ಯವಸ್ಥಾಪಕರಾಗಿ (Chief Transportation Manger) ಹಾಗೂ ಶುಲ್ಕರಹಿತ ಆದಾಯ ಮತ್ತು ಪ್ರಯಾಣಿಕರ ಮಾರುಕಟ್ಟೆ (Non fare revenue and passenger marketing) ವಿಭಾಗದಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ (Chief Commercial Manager) ಉತ್ತಮ ಕಾರ್ಯ ಸಾಧನೆ ಮಾಡಿದ್ದಾರೆ. ಇವರ ಈ ಸೇವಾ ಅನುಭವ, ತಂತ್ರಜ್ಞಾನದ ಪರಿಣಿತಿ, ಸದೃಢ ನಾಯಕತ್ವದ ಗುಣದಿಂದ ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ ಮತ್ತಷ್ಟು ಮೆರಗು ತುಂಬಲಿದ್ದು, ಆ ಮೂಲಕ ರೈಲ್ವೆಯ ಹಿರಿಮೆ ಹೆಚ್ಚಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್