ಜಗಜಿತ್ ಸಿಂಗ್ ತಲೆವಾಲ ದಲೈವಾಲಾ ಉಪವಾಸ ಸತ್ಯಾಗ್ರಹ 40ನೇ ದಿನಕ್ಕೆ
ಜಗಜಿತ್ ಸಿಂಗ್ ತಲೆವಾಲ ದಲೈವಾಲಾ ಉಪವಾಸ ಸತ್ಯಾಗ್ರಹ 40ನೇ ದಿನಕ್ಕೆ
ಜಗಜಿತ್ ಸಿಂಗ್ ತಲೆವಾಲ ದಲೈವಾಲಾ ಉಪವಾಸ ಸತ್ಯಾಗ್ರಹ 40ನೇ ದಿನಕ್ಕೆ


ಬೆಂಗಳೂರು, 04 ಜನವರಿ (ಹಿ.ಸ.) :

ಆ್ಯಂಕರ : ಇಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ತಲೆವಾಲ ದಲೈವಾಲಾ ಉಪವಾಸ ಸತ್ಯಾಗ್ರಹ 40ನೇ ದಿನಕ್ಕೆ ಮುಂದುವರಿದಿದ್ದುಪಂಜಾಬ್ ಗಡಿ ಕನೋರಿ ಕಿಸಾನ್ ಮಹಾ ಪಂಚಾಯತ್ ನಲ್ಲಿ ಭಾಗವಹಿಸಿ ಮಾತನಾಡಿದಾಗ

ದೇಶದ ರೈತರೆಲ್ಲ ನಾವೆಲ್ಲ

ರೈತ ಮುಖಂಡ ದಲೈವಾಲ ಹೋರಾಟ ಬೆಂಬಲಿಸಲು ಬಂದಿದ್ದೇವೆ ಅವರ ಜೀವಕ್ಕೆ ಅಪಾಯವಾದರೆ ಸ್ವಾತಂತ್ರ್ಯ ಪೂರ್ವ ಸಿಪಾಯಿ ದಂಗೆ ಈಗ ದೇಶದಲ್ಲಿ ರೈತರ ದಂಗೆಯಾದಿತು ಎಚ್ಚರಿಕೆ ನೀಡುತ್ತಿದ್ದೇವೆ.

ದೇಶದಲ್ಲಿರುವ 70ರಷ್ಟು ಜನಸಂಖ್ಯೆಯ ರೈತ ಸಮುದಾಯದ ಬೇಡಿಕೆ ಎಂ ಎಸ್ ಪಿ ಗ್ಯಾರಂಟಿ ಕಾನೂನು ಈಡೇರಿಸಲು ಸಾಧ್ಯವಿಲ್ಲವೆ ಕೇಂದ್ರ ಸರ್ಕಾರ ಉತ್ತರಿಸಲಿ.

ನೋಡೋಣ ದೇಶದಲ್ಲಿರುವ ಉದ್ಯಮಿಗಳು ಸಾಲ ಮನ್ನಾ ಮಾಡಿ ಎಂದು ಕೇಳಲೇ ಇಲ್ಲ ಕೇಂದ್ರ ಸರ್ಕಾರ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ದೇಶದಲ್ಲಿ ಯಾರೂ ಕೇಳದೆ ಇರುವ ಒಂದು ದೇಶ ಒಂದು ಚುನಾವಣೆ. ಒಂದು ದೇಶ ಒಂದು ಪಡಿತರ ಕಾರ್ಡ್ ಇವೆಲ್ಲವನ್ನು ತರಾತುರಿಯಲ್ಲಿ ಜಾರಿಗೆ ತರುತ್ತಾರೆ. ಇದನ್ನು ಯಾರು ಕೇಳಿದ್ದಾರೆ. 80ರಷ್ಟು ಇರುವ ರೈತರು ವರ್ಷಗಟ್ಟಲೆ ಹೋರಾಟ ಮಾಡಿ ಕೇಳುವ ಎಂ ಎಸ್ ಪಿ ಕಾನೂನು ಮಾಡಲು ಏನು ಕಷ್ಟ. ಪ್ರಧಾನ ಮಂತ್ರಿ ಉತ್ತರಿಸಲಿ.

ಪ್ರಧಾನಿ ಯವರು ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಮುಗಿದಿದೆ ಅಧಿಕಾರಕ್ಕೆ ಬರುವ ಮೊದಲು ಹೇಳಿದಂತೆ

ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ

2022ಕ್ಕೆ ರೈತರ ಆದಾಯ ದ್ವಿಗುಣ ಮಾಡಲಿಲ್ಲ

ಎಂ ಎಸ್ ಪಿ ಗ್ಯಾರಂಟಿ ಕಾನೂನು ಬಗ್ಗೆ ಮಾತನಾಡುತ್ತಿಲ್ಲ

ರೈತರ ಉತ್ಪನ್ನಗಳಿಗೆ ಜಿಎಸ್‌ಟಿ ಬರೆ ಹಾಕಿದರು

ರೈತರು ಹೇಡಿಗಳಲ್ಲ.ಸ್ವಾತಂತ್ರ್ಯ ಚಳುವಳಿಯ ಮಾದರಿಯ ಚಳುವಳಿ ಪಂಜಾಬ್ ಹರಿಯಾಣ ರೈತರು ಮಾಡುತ್ತಿದ್ದಾರೆ ಇಡೀ ದೇಶದ ರೈತರು ಅವರ ಜೊತೆ ಬೆಂಗಾವಲಾಗಿದ್ದೇವೆ.

ದಲೈವಾಲಾ ಪ್ರಾಣಕ್ಕೆ ಕುತ್ತು ಬಂದರೆ. ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರಿಕೆ ಇರಲಿ.

ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ದೇಶದ ರೈತರ ಹಿತಕ್ಕಾಗಿ ದಲೈವಾಲ 40ದಿನದಿಂದ ಉಪವಾಸ ನಡೆಸುತ್ತಿದ್ದಾರೆ. ಈ ಸತ್ಯಾಗ್ರಹ ಬೆಂಬಲಿಸಿ ಕರ್ನಾಟಕದಲ್ಲಿ ನಿರಂತರವಾಗಿ ಹೋರಾಟ ಮುಂದುವರೆಯುತ್ತಿದೆ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಮೇಣದಬತ್ತಿ ಉರಿಸಿ ಪ್ರತಿಭಟನೆ ಮಾಡಿದ್ದೇವೆ. ಕಳೆದ 31ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ಮಾಡಿದ್ದೇವೆ.

ಈಗ ಕರ್ನಾಟಕದ ರೈತರ ತಂಡ ಕನೋರಿ ಬಾರ್ಡರ್ ಗೆ ಬಂದಿದ್ದೇವೆ ಇನ್ನೂ ಸಾವಿರಾರು ರೈತರು ಇಲ್ಲಿಗೆ ಬರಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಎಚ್ಚರಿಸಿದರು 2 ಲಕ್ಷ ಹೆಚ್ಚು ರೈತರು ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎರಡು ಮೂರು ಜಿಲ್ಲೆಗಳಲ್ಲಿ ರಸ್ತೆ ಬಂದಾಗಿತ್ತು ಸಮಾವೇಶಕ್ಕೆ ಆಗಮಿಸುತ್ತಿದ್ದ ಎರಡು ಬಸ್ಸುಗಳು ಭೀಕರ ಅಪಘಾತವಾಗಿ ಸಣ್ಣ ಪುಟ್ಟ ಗಾಯಗಳಾಗಿವೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಸಮಾವೇಶದ ವೇದಿಕೆಗೆ ಉಪವಾಸದಲ್ಲಿ ಇರುವ ಜಗಜಿತ್ ಸಿಂಗ್ ಧಲೈವಾಲಾ ರವರನ್ನು ವೈದ್ಯರ ನಿಗ ವಹಿಸಿ ವೇದಿಕೆಗೆ ಕರೆತಂದರು ಅವರು ಎಲ್ಲರಿಗೂ ಕೈ ಮುಗಿದು ಮನವಿ ಮಾಡಿದರು ಮಾತನಾಡಲು ಸಾಧ್ಯವಾಗಲಿಲ್ಲ ಯಾವುದೇ ಪೋಲಿಸ್ ಬಂದುಬಸ್ತ ಇಲ್ಲದೆ ಶಾಂತಿಯುತವಾಗಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಭಾಗವಹಿಸಿದ ಬೇರೆ ಬೇರೆ ರಾಜ್ಯಗಳ ರೈತ ಮುಖಂಡರು ಮಾತನಾಡಿದರು ಪಂಜಾಬಿನ ಸುಖಜಿತ್ ಸಿಂಗ್ ಹರಿಯಾಣದ ಅಭಿಮನ್ಯು ಕೂಹರ್.. ಲಕ್ವಿಂದರ್ ಸಿಂಗ್. ತಮಿಳುನಾಡಿನ ಪಿ ಆರ್ ಪಾಂಡ್ಯನ್. ಬಿಹಾರದ ಅರುಣ್ ಸಿನ್ಹ. ಉತ್ತರ ಪ್ರದೇಶದ ಹರಪಾಲ ಬಿಲಾರಿ. ಇನ್ನು ಮುಂತಾದವರು ಮಾತನಾಡಿದರು.

-ಕುರುಬೂರ್ ಶಾಂತಕುಮಾರ್

ಸಂಚಾಲಕರು,

ದಕ್ಷಿಣ ಭಾರತ ರಾಜ್ಯಗಳು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಕರ್ನಾಟಕ

9448060640

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande