ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್
ಹೈದರಾಬಾದ್ , 2 ಜನವರಿ (ಹಿ.ಸ.) : ಆ್ಯಂಕರ್ : ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಪಿನಾಕ' ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.ಇದೀಗ ಹೊಸ ವರ್ಷದಲ್ಲಿ ಹೊಸ ಚಲನ ಚಿತ್ರವನ್ನು ನಟ ಗಣೇೇಶ ಅವರು ಘೋಷಣೆ ಮಾಡಿದ್ದಾರೆ. ಗಣೇಶ್ ಅವರು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಣೇಶ್ ಅವರು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.


ಹೈದರಾಬಾದ್ , 2 ಜನವರಿ (ಹಿ.ಸ.) :

ಆ್ಯಂಕರ್ :

ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಪಿನಾಕ' ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.ಇದೀಗ ಹೊಸ ವರ್ಷದಲ್ಲಿ ಹೊಸ ಚಲನ ಚಿತ್ರವನ್ನು ನಟ ಗಣೇೇಶ ಅವರು ಘೋಷಣೆ ಮಾಡಿದ್ದಾರೆ.

ಗಣೇಶ್ ಅವರು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ‌ ‘ಪೀಪಲ್ ಮೀಡಿಯಾ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ 49ನೇ ಚಲನಚಿತ್ರವಾಗಿದ್ದು , ಕನ್ನಡದಲ್ಲಿ ಇದು ಸಂಸ್ಥೆಯ ಎರಡನೇ ಪ್ರಯತ್ನವಾಗಿದೆ. ಈ ಚಿತ್ರಕ್ಕೆ ಖ್ಯಾತ ನೃತ್ಯ ನಿರ್ದೇಶಕ ಬಿ ಧನಂಜಯ ನಿರ್ದೇಶನ ಮಾಡುತ್ತಿದ್ದಾರೆ.ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಚಲನಚಿತ್ರ ಚಿತ್ರೀಕರಣ ನಡೆಯಲಿದೆ.

ಈ ಚಿತ್ರದ ಶೀರ್ಷಿಕೆ ಟೀಸರ್ ಮತ್ತು ಚಲನಚಿತ್ರದ ತುಣುಕುಗಳನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ಶಿವನಂತೆ ,ಉದ್ದನೆಯ ಕೂದಲು, ಕುರುಚಲು ಗಡ್ಡ ಬಿಟ್ಟು ಖಡಕ್ ನೋಟದಲ್ಲಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಕೆಲವರಿಗೆ ಮಾಟಗಾರನಂತೆಯೂ ಇನ್ನೂ ಕೆಲವರಿಗೆ ಅಘೋರಿಯಂತೆಯೂ ನಟ ಗಣೇಶ್ ಕಾಣಿಸಿಕೊಂಡಿದ್ದಾರೆ.ನಟ ಗಣೇಶ್ ಖಡಕ್ ಧ್ವನಿಯ ಹಿನ್ನೆಲೆಯಲ್ಲಿ 'ಪಿನಾಕ' ಟೀಸರ್ ಶುರುವಾಗುತ್ತದೆ. ಇದು ಕಟ್ಟುಕಥೆಯಲ್ಲ, ಜನರಿಗಾಗಿ ಬದುಕಿದ ಧೀರನ ದಂತಕಥೆ, ಕ್ಷುದ್ರಶಕ್ತಿಯ ಎದುರು ರುದ್ರಶಕ್ತಿಯ ಎನ್ನುವ ಸಂಭಾಷಣೆ ಗಮನ ಸೆಳೆಯುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande