ಜ. 4, 5ರಂದು `ಬಳ್ಳಾರಿ ಜಿಲ್ಲಾ ಕಲಾ ವೈಭವ - 2025'
ಬಳ್ಳಾರಿ, 02 ಜನವರಿ (ಹಿ.ಸ.) : ಆ್ಯಂಕರ್ : ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಮತ್ತು ಕಲಾವಿದರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ಜನವರಿ 4 ಮತ್ತು 5 ರಂದು ಎರಡು ದಿನಗಳು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ `ಬಳ್ಳಾರಿ ಜಿಲ್ಲಾ ಕ
ಜನವರಿ 4 ಮತ್ತು 5 ರಂದು - `ಬಳ್ಳಾರಿ ಜಿಲ್ಲಾ ಕಲಾ ವೈಭವ - 2025'


ಬಳ್ಳಾರಿ, 02 ಜನವರಿ (ಹಿ.ಸ.) :

ಆ್ಯಂಕರ್ : ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಮತ್ತು ಕಲಾವಿದರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ಜನವರಿ 4 ಮತ್ತು 5 ರಂದು ಎರಡು ದಿನಗಳು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ `ಬಳ್ಳಾರಿ ಜಿಲ್ಲಾ ಕಲಾ ವೈಭವ - 2025'ರನ್ನು ಆಯೋಜಿಸಲಾಗಿದೆ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ಕನ್ನಡ ಸಾಹಿತ್ಯ ಪರಿಷತ್ತಿನ `ಕನ್ನಡ ಭವನ'ದಲ್ಲಿ ಗುರುವಾರ ಏರ್ಪಡಿಸಿದ್ದಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು,

ಜನವರಿ 4 ರ ಶನಿವಾರ ಬೆಳಗ್ಗೆ 9 ಗಂಟೆಗೆ ರಾಘವ ಕಲಾಮಂದಿರದಿಂದ `ವಸಂತ ವೈಭವ' ಮೆರವಣಿಗೆ ನಡೆಸಲಾಗುವುದು. ಗುತ್ತಿಗೆದಾರ ಮಸೀದಿಪುರ ಸಿದ್ದರಾಮನಗೌಡ ಅವರು ಮೆರವಣಿಗೆಯನ್ನು ಉದ್ಘಾಟಿಸುವರು. ಮೆರವಣಿಗೆಯು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‍ಪೇಟೆ, ತೇರು ಬೀದಿ, ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರದಲ್ಲಿ ಸಮಾರೋಪಗೊಳ್ಳಲಿದೆ. ಛದ್ಮ ವೇಷ, ಎತ್ತಿನ ಬಂಡಿ ಮೆರವಣಿಗೆ, ಹಲಗೆ ವಾದನ, ಬಜನಾಪದ ಸೇರಿದಂತೆ 38 ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವವು.

ಸಂಸದ ಇ. ತುಕಾರಾಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ನಾರಾ ಭರತರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು. ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಮೇಯರ್ ಎಂ. ನಂದೀಶ್, ಮುಖಂಡ ಮುಂಡರಗಿ ನಾಗರಾಜ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಎಸ್‍ಪಿ ಡಾ. ಶೋಭರಾಣಿ ವಿ.ಜೆ, ಪಾಲಿಕೆ ಆಯುಕ್ತ ಖಲೀಲ್‍ಸಾಬ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಿಂದ ವಿಜಯಪುರದ ಸಂಜೀವ್ ಇವರಿಂದ ಸತ್ತಿಗೆ ಕುಣಿತ, ಬಬಲೇಶ್ವರದ ಈಶ್ವರ್ ಮಾದರ್ ಅವರಿಂದ ಗೊಂಬೆ ಕುಣಿತ, ರಾಯಚೂರಿನ ಗದ್ದಪ್ಪ ಭಜಂತ್ರಿ ಇವರಿಂದ ಕಣಿ ಹಲಗೆ ನಡೆಯಲಿವೆ. ರಾತ್ರಿ ನಾಟಕ, ಬಯಲಾಟ, ಸಮೂಹ ನೃತ್ಯ, ಜನಪದ ಸಂಗೀತ, ಹಿಂದುಸ್ತಾನಿ ಗಾಯನ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ನಡೆಯಲಿವೆ ಎಂದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಗಾಯನ ಕವಿ ಕಾವ್ಯ ಗುಂಚ ಗಾಯನ ಮತ್ತು ತಲಾ ಪ್ರದರ್ಶನ ಮತ್ತು ಸಮೂಹ ನೃತ್ಯ `ಬಾಳಿದ ಹೂ' ನಾಟಕ ಮತ್ತು `ರಕ್ತರಾತ್ರಿ' ನಾಟಕ ಪ್ರದರ್ಶನ. ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಆದೋನಿ ವೀಣಾ, ಕಾರ್ಯದರ್ಶಿ ಮುದ್ದಟನೂರು ಹೆಚ್. ತಿಪ್ಪೇಸ್ವಾಮಿ, ಖಜಾಂಜಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿ ಸುಬ್ಬಣ್ಣ, ವೀರೇಶ ದಳವಾಯಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿನೋದ್,

ಮಂಜುನಾಥ ಗೋವಿಂದವಾಡ, ನಾಗನಗೌಡ, ಜಯಣ್ಣ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande