ಕೊಪ್ಪಳ, 15 ಜನವರಿ (ಹಿ.ಸ.) :
ಆ್ಯಂಕರ್ : ಕೊಪ್ಪಳ ಮಾರ್ಗವಾಗಿ ಬೆಂಗಳೂರಿಗೆ ಹೆಚ್ಚು ರೈಲ್ವೆಗಳನ್ನು ಓಡಿಸಲು ನೆನೆಗುದಿಗೆ ಬಿದ್ದ ಯೋಜನೆಗಳನ್ನು ತೀವ್ರಗೊಳಿಸಲು ಒತ್ತಾಯಿಸಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ.
ಕೊಪ್ಪಳ : ಹುಬ್ಬಳ್ಳಿ ಬೆಂಗಳೂರು ರೈಲುಗಳನ್ನು ವಾಯ ಕೊಪ್ಪಳ ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಹೆಚ್ಚು ರೈಲ್ವೆಗಳನ್ನು ಓಡಿಸುವುದು ಸೇರಿದಂತೆ ನೆನೆಗುದಿಗೆ ಬಿದ್ದಿ ಯೋಜನೆಗಳನ್ನು ತೀವ್ರಗೊಳಿಸಲು ಒತ್ತಾಯಿಸಿ ರೈಲ್ವೆ ರಾಜ್ಯ ಸಚಿವ ವಿ,ಸೋಮಣ್ಣ, ಹುಬ್ಬಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕಿ ಶ್ರೀ ಮತಿ ಬೇಲಾ ಮೀನಾ ಹಾಗೂ ಕೊಪ್ಪಳ ಸಂಸದ ಕೆ,ರಾಜಶೇಖರ್ ಬಿ,ಹಿಟ್ನಾಳ ಅವರಿಗೆ ಕೊಪ್ಪಳ ರೈಲ್ವೆ ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಸ್,ಎ,ಗಫಾರ್, ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು, ಸಹ ಕಾರ್ಯದರ್ಶಿ ಶಿವಪ್ಪ ಹಡಪದ್, ನ್ಯಾಯವಾದಿ ಲಕ್ಷ್ಮಣ ಮುಳಗುಂದ,ಶರಣಪ್ಪ ಗುಮಗೇರಿ ಮುಂತಾದವರು ಮನವಿ ಅರ್ಪಿಸಿದರು.
ಮನವಿಯಲ್ಲಿ ಗದಗ ವಾಡಿ ರೈಲ್ವೆ ಯೋಜನೆಯಡಿ ತಳಕಲ್ ದಿಂದ ಕುಷ್ಟಗಿವರಿಗೆ ಈ ಮಾರ್ಗದ ಹಳಿ ಕಾಮಗಾರಿ ಪೂರ್ಣಗೊಂಡಿದೆ,ಸಂಖ್ಯೆ: 06243/06244 ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಹೊಸಪೇಟೆಯಿಂದ ಮುನಿರಾಬಾದ, ಗಿಣಿಗೇರಾ, ಕೊಪ್ಪಳ, ತಳಕಲ್ ಜಂಕ್ಷನ್ ಮೂಲಕ ಕುಕನೂರು, ಯಲಬುರ್ಗಾ, ಕುಷ್ಟಗಿ ವರೆಗೆ ವಿಸ್ತರಿಸಬೇಕು,ಇದರಿಂದ ಒಣ ಪ್ರದೇಶದ ಬಡ ಗ್ರಾಮೀಣರಿಗೆ ಅನುಕೂಲವಾಗುತ್ತದೆ,
ಬೆಂಗಳೂರು ಕುಷ್ಟಗಿ ಪ್ಯಾಸೆಂಜರ್ ರೈಲನ್ನಾಗಿ ಮಾರ್ಪಡಿಸಿ ಓಡಿಸಬೇಕು, ಅಲ್ಲದೆ ಹುಬ್ಬಳ್ಳಿ ಯಿಂದ ಕುಷ್ಟಗಿಗೆ ಹೊಸ ರೈಲು ಸಂಚಾರಿಸಲು ಕ್ರಮ ಕೈಗೊಳ್ಳಬೇಕು,ಮೂರು ದಶಕಗಳಾಗುತ್ತಿದ್ದರೂ ನೆನೆಗುದ್ದಿಗೆ ಬಿದ್ದಿರುವ ಮುನಿರಾಬಾದ ಮಹೆಬೂಬ ನಗರ ರೈಲ್ವೆ ಮಾರ್ಗ ಕೇವಲ ಸಿಂಧನೂರು ವರೆಗೆ ಮಾತ್ರ ಹಳಿ ಕಾಮಗಾರಿ ಪೂರ್ಣಗೊಂಡಿದೆ,ಗದಗ ದಿಂದ ವಾಡಿ ರೈಲ್ವೆ ಮಾರ್ಗದ ಯೋಜನೆಯು ಒಂದು ದಶಕ ಕಳೆದರೂ ತಳಕಲ್ ದಿಂದ ಕುಷ್ಟಗಿ ವರೆಗೆ ಮಾತ್ರ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡಿದ್ದು, ಈ ಎರಡೂ ಮಾರ್ಗಗಳು ಆಮೆ ಗತಿಯಲ್ಲಿ ಸಾಗಿದೆ, ಅಗತ್ಯ ಅನುದಾನ ತಕ್ಷಣ ಬಿಡುಗಡೆ ಮಾಡುವ ಮೂಲಕ ಯೋಜನೆಗಳನ್ನು ತೀವ್ರದಲ್ಲಿ ಪೂರ್ಣಗೊಳಿಸಬೇಕು.
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮತ್ತು ರೈಲ್ವೆ ವಸತಿ ಗೃಹಗಳಿಗೆ ತುಂಗಭದ್ರ ಕುಡಿಯುವ ನೀರು ಪೂರೈಕೆ ಮಾಡಲು, ಪ್ರಯಾಣಿಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತ ಸ್ಥಳ ಹಾಗೂ ಆಟೋ ರಿಕ್ಷಾಗಳ ಶಾಶ್ವತ ನಿಲ್ದಾಣ,ಕೇವಲ ಹತ್ತು ಸಂಖ್ಯೆಯಲ್ಲಿರುವ ರೈಲ್ವೆ ವಸತಿ ಗೃಹಗಳನ್ನು ಅರವತ್ತಕ್ಕೆ ಹೆಚ್ಚಿಸಿ ಆವರಣ ಗೋಡೆ ನಿರ್ಮಿಸಬೇಕು,ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿಸುವ ಸಮಯ ಕೋವಿಡ್ ಸಂದರ್ಭದಲ್ಲಿ ಕಡಿತಗೊಳಿಸಿದ್ದು, ಮೊದಲಿನಂತೆ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಸಮಯ ವಿಸ್ತರಿಸಬೇಕು.
ನಿಲ್ದಾಣದಲ್ಲಿ ಅನೇಕ ದಶಕಗಳಿಂದ ಶೌಚಾಲಯ ಇದ್ದು ಇಲ್ಲದಂತಿದೆ, ಪ್ಲಾಟ್ ಫಾರಂ ಒಂದು ಮತ್ತು ಎರಡರಲ್ಲಿ ಪ್ರಯಾಣಿಕರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು,ದುಡಿಯುವ ಜನರ ಅನುಕೂಲಕ್ಕಾಗಿ ಎಲ್ಲಾ ರೈಲುಗಳ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ತಲಾ ನಾಲ್ಕು ಸಾಮಾನ್ಯ ಬೋಗಿಗಳನ್ನು ಅಳವಡಿಸಬೇಕು, ಹುಬ್ಬಳ್ಳಿ ಬೆಂಗಳೂರು ವಾಯ ಹಾವೇರಿ ಮೂಲಕ ನಿತ್ಯ ಸಂಚರಿಸುವ ನಾಲ್ಕು ರೈಲುಗಳನ್ನು ಹುಬ್ಬಳ್ಳಿ ವಾಯ ಕೊಪ್ಪಳ - ಹೊಸಪೇಟೆ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬೇಕು, ಅಶೋಕ ವೃತ್ತದಿಂದ ಕಿನ್ನಾಳಿಗೆ ಹೋಗುವ ಮಾರ್ಗದ ಕೆಳ ಸೇತುವೆ ಕಳಪೆ ಗುಣಮಟ್ಟ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಕಾರ್ಮಿಕ ವೃತ್ತದಿಂದ ಭಾಗ್ಯನಗರಕ್ಕೆ ಹೋಗುವ ಮಾರ್ಗದಲ್ಲಿ ಮೇಲ್ಸೇತುವೆ ಕಳಪೆ ಯಾಗಿದೆ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,
ಸಂಖ್ಯೆ : 16217/16218. ಮೈಸೂರು ದಿಂದ ಶಿರಡಿ ರೈಲನ್ನು ವಾರಕ್ಕೆ ಒಂದು ದಿನ ಮಾತ್ರ ಚಲಿಸುತ್ತಿದ್ದು, ಇದನ್ನು ನಿತ್ಯ ಚಲಿಸುವಂತೆ ಕ್ರಮ ಕೈಗೊಳ್ಳಬೇಕು,
ಸಂಖ್ಯೆ :16545/16546. ಯಶವಂತಪುರ ದಿಂದ ಸಿಂಧನೂರು.ಸಿಂಧನೂರು ದಿಂದ ಯಶವಂತಪುರ.ಈ ರೈಲು ಗೀಣಿಗೇರಾ ರೈಲ್ವೆ ನಿಲ್ದಾಣದಿಂದ 10 ಕಿಲೋ ಮೀಟರ್ ಅಂತರದಲ್ಲಿರುವ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಬೇಕು. ಇದರಿಂದ ಕೊಪ್ಪಳ ಜಿಲ್ಲಾ ಕೇಂದ್ರದ ಜನತೆಗೆ ಬಹಳ ಅನುಕೂಲವಾಗುತ್ತದೆ.
ಬೆಳಿಗ್ಗೆ 8:30ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ ಹಾಗೂ ಮಧ್ಯಾಹ್ನ 2:30 ಕ್ಕೆ ಹುಬ್ಬಳ್ಳಿ ಯಿಂದ ಬಳ್ಳಾರಿಗೆ ಹೊಸದಾಗಿ ಡೆಮೋ ಪ್ಯಾಸೆಂಜರ್ ರೈಲನ್ನು ಪ್ರಾರಂಭಿಸಬೇಕು,
ಹುಬ್ಬಳ್ಳಿ ವಾಯ ಗದಗ ಕೊಪ್ಪಳ ಹೊಸಪೇಟೆ ಬಳ್ಳಾರಿ ಗುಂತಕಲ್ ಆದೋನಿ ಮಂತ್ರಾಲಯ ರಾಯಚೂರು ಯಾದಗಿರಿ ಕಲಬುರಗಿ ಮಾರ್ಗವಾಗಿ ನಿತ್ಯ ಬೀದರಿಗೆ ಹೊಸ ರೈಲನ್ನು ಪ್ರಾರಂಭಿಸುವುದರಿಂದ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ,
ಸಂಖ್ಯೆ : 07335/07336 ಬೆಳಗಾವಿ ಯಿಂದ ಮಣಗೂರು ರೈಲನ್ನು ದಿನ ನಿತ್ಯ ಚಲಿಸುವಂತೆ ಕ್ರಮ ಕೈಗೊಳ್ಳಬೇಕು,
ಸಂಖ್ಯೆ : 11305/11306 ಸೋಲಾಪುರ್ ಹೊಸಪೇಟೆ ಸೋಲಾಪುರ್ ಡೆಮೋ ಎಕ್ಸ್ ಪ್ರೆಸ್ ರೈಲು, ಸಂಖ್ಯೆ 17329/17330 ಹುಬ್ಬಳ್ಳಿ ವಿಜಯವಾಡ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಮತ್ತು ಸಂಖ್ಯೆ: 06243/06244 ಬೆಂಗಳೂರು ಹೊಸಪೇಟೆ ಇಂಟರ್ ಸಿಟಿ ಎಕ್ಸ್ ಪ್ರೆಸ್ ಈ ಮೂರು ರೈಲುಗಳು ಕೋವಿಡ್ ಕ್ಕಿಂತ ಮುಂಚೆ ಪ್ಯಾಸೆಂಜರ್ ರೈಲು ಆಗಿತ್ತು,ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದ್ದನ್ನು ಬಳಿಕ ಎಕ್ಸ್ ಪ್ರೆಸ್ ಆಗಿದ್ದರಿಂದ ಜನರಿಗೆ ಮೂರು ಪಟ್ಟುಕಿಂತಲೂ ಹೆಚ್ಚು ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ, ಇವುಗಳನ್ನು ತಕ್ಷಣ ಪ್ಯಾಸೆಂಜರ್ ರೈಲುಗಳಾಗಿ ಮೊದಲಿನ ದರದಲ್ಲೇ ಟಿಕೆಟ್ ಗಳನ್ನು ನಿಗದಿಪಡಿಸಿದರೆ ಶೇಕಡ 80ರಷ್ಟು ಇರುವ ದುಡಿಯುವ ಬಡ ಜನರಿಗೆ ಅನುಕೂಲವಾಗುತ್ತದೆ.
ರೈಲು ಸಂಖ್ಯೆ : 17039 /17040. ಸಿಕಂದರಾಬಾದ್ ದಿಂದ ವಾಸ್ಕೋಡಿ ಗಾಮ ಎಕ್ಸ್ ಪ್ರೆಸ್ ವಾರಕ್ಕೆ ಮೂರು ದಿನ ಇರುವುದನ್ನು ನಿತ್ಯ ಸಂಚರಿಸಲು ಕ್ರಮ ಕೈಗೊಳ್ಳಬೇಕು,
ಸಂಖ್ಯೆ : 17313/17314. ಹುಬ್ಬಳ್ಳಿ ದಿಂದ ಎಂ,ಜಿ,ಆರ್, ಚೆನ್ನೈ ಸೆಂಟ್ರಲ್.ಹುಬ್ಬಳ್ಳಿಗೆ ರೈಲು ವಾರಕ್ಕೆ ಮೂರು ದಿನ ಮಾತ್ರ ಚಲಿಸುತ್ತಿದ್ದನ್ನು ನಿತ್ಯ ಚಲಾಯಿಸುವಂತೆ ಆಗಬೇಕು, ಬಹುದಿನಗಳ ಬೇಡಿಕೆಯಾದ ಆಲಮಟ್ಟಿ ಕೊಪ್ಪಳ ಚಿತ್ರದುರ್ಗ ಹೊಸ ರೈಲ್ವೆ ಮಾರ್ಗ ನಿರ್ಮಿಸಿದರೆ.ವಿಜಯಪುರ ದಿಂದ ಬೆಂಗಳೂರಿಗೆ ಮಧ್ಯ ಕರ್ನಾಟಕ ನೇರ ಸಂಪರ್ಕ ರೈಲ್ವೆ ಮಾರ್ಗ ವಾಗುತ್ತದೆ. ಈ ಹೊಸ ರೈಲ್ವೆ ಮಾರ್ಗಕ್ಕೆ ಮುಂದಿನ ಬಜೆಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಬೇಕು,
ಗೇಟ್ ಸಂಖ್ಯೆ :63.ರ ಸ್ವಾಮಿ ವಿವೇಕಾನಂದ ಶಾಲೆ ಹತ್ತಿರ ಇರುವ ಕೆಳ ಕಿರು ಸೇತುವೆ ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು. ಇದಕ್ಕೆ ರಸ್ತೆ ಸಂಪರ್ಕ ಇರುವುದಿಲ್ಲ ಈ ರಸ್ತೆ ಬೇಗನೆ ನಿರ್ಮಿಸಬೇಕು,
ಗೇಟ್ ನಂಬರ್:65ರ. ಕೆ,ಇ,ಬಿ.ಲಕ್ಷ್ಮಿ ಟಾಕೀಜ್ ಹತ್ತಿರ ಇರುವ ಕೆಳ ಕಿರು ಸೇತುವೆ ಕಾಮಗಾರಿ ಆರಂಭಿಸಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು,
ಗೇಟ್ ಸಂಖ್ಯೆ:66 ರ. ಗೇಟ್ ಸಂಖ್ಯೆ:68ರ. ನಡುವೆ ಸಿದ್ದೇಶ್ವರ ನಗರ ಬೇಲ್ದಾರ ಕಾಲೋನಿ ಮತ್ತು ಹೊಸ ಲೇಔಟ್ ಗಳು ನಿರ್ಮಾಣಗೊಳ್ಳುತ್ತಿವೆ.ಮುಖ್ಯ ರಸ್ತೆಯಿಂದ ಎಂ,ಆರ್,ಎಫ್, ಟೈಯರ್ ಶೋ ರೂಮಿನ ಪಕ್ಕದ ರಸ್ತೆ ಮುಖಾಂತರ ಹೊಸ ಕೆಳ ಕಿರು ಸೇತುವೆ ನಿರ್ಮಿಸಬೇಕು,
ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಹತ್ತಿರ ಕಿಡದಾಳ ಗೇಟ್ ಸಂಖ್ಯೆ :68ರ. ಮೇಲ್ಸೇತುವೆ ಟೆಂಡರ್ ಪ್ರಕ್ರಿಯೆ ತಕ್ಷಣ ಮುಗಿಸಿ ಕಾಮಗಾರಿ ಪ್ರಾರಂಭಿಸಬೇಕು.
ರಾಯಚೂರು ಮತ್ತು ಯಾದಗಿರಿ ರೈಲ್ವೆ ವಿಭಾಗವನ್ನು ಎಂಟುನೂರು ಕಿಲೋಮೀಟರ್ ದೂರದ ವಿಶಾಖಪಟ್ಟಣಕ್ಕೆ ಸೇರಿಸಿರುವುದು ಖಂಡನೀಯವಾಗಿದೆ, ಹುಬ್ಬಳ್ಳಿ ರೈಲ್ವೆ ವಲಯಕ್ಕೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಸೇರಿಸಬೇಕು ಎಂದು ಕೊಪ್ಪಳ ರೈಲ್ವೆ ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಸ್,ಎ,ಗಫಾರ್. ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು,ಶಿವಪ್ಪ ಹಡಪದ್, ನ್ಯಾಯವಾದಿ ಲಕ್ಷ್ಮಣ ಮುಳಗುಂದ, ಶರಣಪ್ಪ ಗುಮಗೇರಿ ಮುಂತಾದವರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್