ಇಪಿಎಫ್ ಖಾತೆಯಿಂದ ಲಕ್ಷ ರೂ ಹಿಂಪಡೆಯಲು ಅವಕಾಶ
ನವದೆಹಲಿ, 19ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಇಪಿಎಫ್ ವಿಚಾರದಲ್ಲಿ ಸರ್ಕಾರವು ನಿಯಮಗಳನ್ನು ಸಾಧ್ಯವಾದಷ್ಟೂ ಸರಳಗೊಳಿಸುತ್ತಿದೆ. ಇಪಿಎಫ್​ನ ಕಾರ್ಯಗಳನ್ನು ಈಗ ಆನ್​ಲೈನ್​ನಲ್ಲಿ ಸುಲಭವಾಗಿ ಮಾಡಬಹುದು. ಇಪಿಎಫ್ ಖಾತೆಯಲ್ಲಿ ಬಾಕಿ ಎಷ್ಟಿದೆ ಎಂದು ಪರಿಶೀಲಿಸುವುದರಿಂದ ಹಿಡಿದು, ತುರ್ತು ಸಂದರ್ಭದಲ್ಲಿ ಹ
EPF withdrawal limit increase and other changes


ನವದೆಹಲಿ, 19ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಇಪಿಎಫ್ ವಿಚಾರದಲ್ಲಿ ಸರ್ಕಾರವು ನಿಯಮಗಳನ್ನು ಸಾಧ್ಯವಾದಷ್ಟೂ ಸರಳಗೊಳಿಸುತ್ತಿದೆ. ಇಪಿಎಫ್​ನ ಕಾರ್ಯಗಳನ್ನು ಈಗ ಆನ್​ಲೈನ್​ನಲ್ಲಿ ಸುಲಭವಾಗಿ ಮಾಡಬಹುದು. ಇಪಿಎಫ್ ಖಾತೆಯಲ್ಲಿ ಬಾಕಿ ಎಷ್ಟಿದೆ ಎಂದು ಪರಿಶೀಲಿಸುವುದರಿಂದ ಹಿಡಿದು, ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯುವವರೆಗೂ ಕಾರ್ಯಗಳನ್ನು ಮಾಡುವುದು ಸುಲಭವಾಗಿದೆ. ಇದೀಗ ಇಪಿಎಫ್ ಖಾತೆಯಿಂದ ವೈಯಕ್ತಿಕ ಅಗತ್ಯಗಳಿಗೆಂದು ಹಿಂಪಡೆಯಬಹುದಾದ ಹಣದ ಮಿತಿಯನ್ನು 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಲಾಗಿದೆ. ಈ ವಿಷಯವನ್ನು ಕೇಂದ್ರ ಕಾರ್ಮಿಕ ಇಲಾಖೆ ಪ್ರಕಟಣೆಯ ಮೂಲಕ ತಿಳಿಸಿದೆ.

‘ಮದುವೆ, ವೈದ್ಯಕೀಯ ಚಿಕಿತ್ಸೆ ಇತ್ಯಾದಿಗೆ ಜನರು ಇಪಿಎಫ್ ಖಾತೆಯತ್ತ ನೋಡುವುದುಂಟು. ಆದ್ದರಿಂದ ಒಮ್ಮೆಗೆ ಹಿಂತೆಗೆದುಕೊಳ್ಳಿ ಮಾಡಬಹುದಾದ ಇಪಿಎಫ್ ಹಣದ ಮಿತಿಯನ್ನು ಒಂದು ಲಕ್ಷ ರೂಗೆ ಏರಿಸಿದ್ದೇವೆ,’ ಎಂದು ಕೇಂದ್ರ ಕಾರ್ಮಿಕ ಇಲಾಖೆ ಹೇಳಿದೆ. ಈ ಹಿಂದೆ ಇದ್ದ 50,000 ರೂ ಮಿತಿಯು ಈಗಿನ ಖರ್ಚುವೆಚ್ಚಗಳಿಗೆ ಸಾಕಾಗುವುದಿಲ್ಲವಾದ್ದರಿಂದ ಮಿತಿ ಏರಿಕೆ ಮಾಡಲಾಗಿದೆ.

ಇಪಿಎಫ್ ಖಾತೆಗಳನ್ನು ನಿಭಾಯಿಸುವ ಇಪಿಎಫ್​ಒ ಸಂಸ್ಥೆ ಕಾರ್ಮಿಕ ಸಚಿವಾಲಯದ ಅಡಿಗೆ ಬರುತ್ತದೆ. ಹಿಂಪಡೆಯಬಹುದಾದ ಹಣದ ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಿದ್ದೂ ಒಳಗೊಂಡಂತೆ ಇನ್ನೂ ಹಲವು ಬದಲಾವಣೆಗಳನ್ನು ಸಚಿವಾಲಯವು ಜಾರಿಗೆ ತಂದಿದೆ. ಇಪಿಎಫ್ ಖಾತೆ ನಿರ್ವಹಣೆ ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯಾಗಿಸಲು ಸಹಕಾರಿಯಾಗುವ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ಹೊಸ ಡಿಜಿಟಲ್ ಚೌಕಟ್ಟು ರಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande