ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ
ನವದೆಹಲಿ, 18 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ ಜನರಿಗೆ ತಮ್ಮ ಹಣದ ಸುರಕ್ಷತೆ ಪ್ರಧಾನ ಎನಿಸುತ್ತಿದೆ. ಹೆಚ್ಚು ಅಪಾಯ ತೆಗೆದುಕೊಳ್ಳಲು ಬಯಸದವರು ಬ್ಯಾಂಕ್ ಠೇವಣಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ನೆಮ್ಮದಿಯಾಗಿರಬಹುದು. ಅಧಿಕ ಬಡ್ಡಿ, ಸ್ಥಿರ ಆ
Post Office Monthly Income Scheme,


ನವದೆಹಲಿ, 18 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ ಜನರಿಗೆ ತಮ್ಮ ಹಣದ ಸುರಕ್ಷತೆ ಪ್ರಧಾನ ಎನಿಸುತ್ತಿದೆ. ಹೆಚ್ಚು ಅಪಾಯ ತೆಗೆದುಕೊಳ್ಳಲು ಬಯಸದವರು ಬ್ಯಾಂಕ್ ಠೇವಣಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ನೆಮ್ಮದಿಯಾಗಿರಬಹುದು. ಅಧಿಕ ಬಡ್ಡಿ, ಸ್ಥಿರ ಆದಾಯ ತರುವ ಹೂಡಿಕೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಒಂದು. ಸರ್ಕಾರದಿಂದ ನಡೆಸಲಾಗುವ ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್ (ಪಿಒಎಂಐಎಸ್) ಮೂಲಕ ಪಕ್ಕಾ ಸುರಕ್ಷಿತ ಆದಾಯ ಸೃಷ್ಟಿಸಬಹುದು. ಇತರ ಸಣ್ಣ ಉಳಿತಾಯ ಯೋಜನೆಗಳಂತೆ ಪಿಒ ಮಾಸಿಕ ಆದಾಯ ಯೋಜನೆಯ ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ನಲ್ಲಿ ಪರಿಷ್ಕರಿಸಲಾಗುತ್ತದೆ. ಸದ್ಯ ಈ ತ್ರೈಮಾಸಿಕ ದಲ್ಲಿ ಶೇ. 7.4ರಷ್ಟು ಬಡ್ಡಿ ಇದೆ. ಪಿಪಿಎಫ್​ನ ಶೇ. 7.1ಕ್ಕಿಂತ ಇದು ಹೆಚ್ಚು ಹೆಚ್ಚು ಬಡ್ಡಿ ನೀಡುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಹೇಗೆ?

ಇದು ಏಕಕಾಲಕ್ಕೆ ಮಾಡಲಾಗುವ ಹೂಡಿಕೆ. ಐದು ವರ್ಷದ ಸ್ಕೀಮ್ ಇದು. ಕನಿಷ್ಠ ಹೂಡಿಕೆ 1,000 ರೂ ಇದೆ. ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ ಠೇವಣಿ ಇಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂವರೆಗೂ ಠೇವಣಿ ಇಡಲು ಅವಕಾಶ ಇರುತ್ತದೆ.

ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ ನೀವು ಮಂಥ್ಲಿ ಇನ್ಕಮ್ ಅಕೌಂಟ್​ಗಳನ್ನು ತೆರೆಯಬಹುದಾದರೂ ಒಟ್ಟಾರೆ ಸೇರಿ ಠೇವಣಿಗಳು 9 ಲಕ್ಷ ರೂ ಮೀರುವಂತಿಲ್ಲ.

ನೀವು 5 ಲಕ್ಷ ರೂ ಠೇವಣಿ ಇರಿಸಿದರೆ ತಿಂಗಳಿಗೆ 3,083 ರೂ ಆದಾಯ ಸಿಗುತ್ತಾ ಹೋಗುತ್ತದೆ.

ಒಂಬತ್ತು ಲಕ್ಷ ರೂ ಠೇವಣಿಗೆ ಮಾಸಿಕ ಆದಾಯ 5,550 ರೂ ಇರುತ್ತದೆ. ಜಂಟಿ ಖಾತೆಯ್ಲಿ 15 ಲಕ್ಷ ರೂ ಡೆಪಾಸಿಟ್ ಇಟ್ಟರೆ 9,250 ರೂ ಮಾಸಿಕ ಆದಾಯ ಸೃಷ್ಟಿಯಾಗುತ್ತದೆ.

ನೀವು ಠೇವಣಿ ಇರಿಸಿದ ನಂತರ ತಿಂಗಳಿನಿಂದಲೇ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ. ಐದು ವರ್ಷದವರೆಗೂ ನಿಮಗೆ ಸ್ಥಿರ ಆದಾಯ ಪ್ರಾಪ್ತವಾಗುತ್ತದೆ. ಐದು ವರ್ಷದ ಬಳಿಕ ನಿಮ್ಮ ಠೇವಣಿ ನಿಮಗೆ ಮರಳುತ್ತದೆ. ಅಗತ್ಯ ಬಿದ್ದರೆ ನೀವು ಮತ್ತೆ ಆ ಯೋಜನೆ ಮುಂದುವರಿಸಿಕೊಂಡು ಹೋಗಬಹುದು.

ಅವಧಿಗೆ ಮುನ್ನ ಠೇವಣಿ ಹಿಂಪಡೆದರೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಠೇವಣಿ ಇರಿಸಿದ ಬಳಿಕ ಒಂದು ವರ್ಷದವರೆಗೂ ಠೇವಣಿ ಹಣ ಹಿಂಪಡೆಯಲು ಆಗುವುದಿಲ್ಲ. ಬಡ್ಡಿ ಹಣ ಮಾತ್ರವೇ ಸಿಗುತ್ತಿರುತ್ತದೆ. ಒಂದು ವರ್ಷದ ಬಳಿಕ ನೀವು ಅಕೌಂಟ್ ಮುಚ್ಚಲು ಅವಕಾಶ ಇದೆ.

ಠೇವಣಿ ಇಟ್ಟು ಒಂದು ವರ್ಷದ ಬಳಿಕ ಮತ್ತು ಮೂರು ವರ್ಷದ ಒಳಗೆ ಮುಚ್ಚಲ್ಪಟ್ಟರೆ ಠೇವಣಿ ಮೊತ್ತದ ಶೇ. 2ರಷ್ಟು ಹಣವನ್ನು ಮುರಿದುಕೊಂಡು ಉಳಿದ ಮೊತ್ತವನ್ನು ನೀಡಲಾಗುತ್ತದೆ. ಮೂರು ವರ್ಷದ ಬಳಿಕ ಅಕೌಂಟ್ ಕ್ಲೋಸ್ ಮಾಡಿದರೆ ಶೇ. 1ರಷ್ಟು ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande