ದೆಹಲಿ-ಕೌಲಾಲಂಪುರ್ ನಡುವೆ ಪ್ರತಿದಿನ ವಿಮಾನ ಸೇವೆ ಪ್ರಾರಂಭಿಸಿದ ಏರ್ ಇಂಡಿಯಾ
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಟಾಟಾ ಸಂಸ್ಥೆ ನೇತೃತ್ವದ ಏರ್ ಇಂಡಿಯಾ ನವದೆಹಲಿ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನ ತಡೆರಹಿತ ವಿಮಾನ ಸೇವೆ ಪ್ರಾರಂಭಿಸಿದೆ. ಏರ್ ಇಂಡಿಯಾದ ಏರ್‌ಬಸ್ A320 ವಿಮಾನವು ಇಂದಿನಿಂದ ತನ್ನ ಯಾನ ಪ್ರಾರಂಭಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸನಲ್ಲಿ
ದೆಹಲಿ-ಕೌಲಾಲಂಪುರ್ ನಡುವೆ ಪ್ರತಿದಿನ ವಿಮಾನ ಸೇವೆ ಪ್ರಾರಂಭಿಸಿದ ಏರ್ ಇಂಡಿಯಾ


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಟಾಟಾ ಸಂಸ್ಥೆ ನೇತೃತ್ವದ ಏರ್ ಇಂಡಿಯಾ ನವದೆಹಲಿ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನ ತಡೆರಹಿತ ವಿಮಾನ ಸೇವೆ ಪ್ರಾರಂಭಿಸಿದೆ. ಏರ್ ಇಂಡಿಯಾದ ಏರ್‌ಬಸ್ A320 ವಿಮಾನವು ಇಂದಿನಿಂದ ತನ್ನ ಯಾನ ಪ್ರಾರಂಭಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಪನಿಯು ರಾಜಧಾನಿ ನವದೆಹಲಿ ಮತ್ತು ಮಲೇಷ್ಯಾದ ರಾಜಧಾನಿ ಕೌಲಾಲಂಪುರ್ ನಡುವೆ ಪ್ರತಿದಿನ ವಿಮಾನ ಸೇವೆ ಪ್ರಾರಂಭಿಸಿರುವುದಾಗಿ ತಿಳಿಸಿದೆ.

ಈ ನೂತನ ವಿಮಾನ ಸಂಚಾರದಿಂದ ಭಾರತ ಮತ್ತು ಮಲೇಷ್ಯಾ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಜಾಗತಿಕವಾಗಿ ಜಾಲ ವಿಸ್ತರಿಸಲು ಹೆಚ್ಚಿನ ಬಲ ಬಂದಿದೆ ಎಂದು ಎರ್ ಇಂಡಿಯಾ ತಿಳಿಸಿದೆ.

ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಈಗ http://airindia.com ಅಥವಾ ಏರ್ ಇಂಡಿಯಾ ಆ್ಯಪ್ ನಲ್ಲಿ ಬುಕ್ ಮಾಡಬಹುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande