400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ
ಹೈದರಾಬಾದ್, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ತಮಿಳಿನ ಸ್ಟಾರ್ ನಟ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಇಂದು (ಸೆ.16) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡ
ಹೈದರಾಬಾದ್


ಹೈದರಾಬಾದ್, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ತಮಿಳಿನ ಸ್ಟಾರ್ ನಟ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಇಂದು (ಸೆ.16) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಮದುವೆಯ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಇಂದು ಸಿದ್ಧಾರ್ಥ್‌, ಅದಿತಿ ರಾವ್‌ ಮದುವೆಯ ಮುದ್ರೆ ಒತ್ತಿದ್ದಾರೆ.

400 ವರ್ಷಗಳ ಹಿಂದಿನ ವನಪರ್ತಿ ಪುರಾತನ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಇನ್ನೂ ಸಿದ್ಧಾರ್ಥ್‌ ಜೊತೆಗಿನ ಅದಿತಿ ಮದುವೆಯ ಫೋಟೋ ಶೇರ್‌ ಮಾಡಿ, ನೀವೇ ನನ್ನ ಸೂರ್ಯ, ನೀವೇ ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು ಎಂದು ಬರೆದುಕೊಂಡಿದ್ದಾರೆ.

ಶಾಶ್ವತ ಪ್ರೀತಿ, ಬೆಳಕು, ಮ್ಯಾಜಿಕ್‌ ಪ್ರಾರಂಭ ಎಂದಿದ್ದಾರೆ ನಟಿ.

ಅದಿತಿ ಮತ್ತು ಸಿದ್ಧಾರ್ಥ್‌ ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮೊದಲ ಮದುವೆಗೆ ವಿಚ್ಛೇದನ ನೀಡಿದ ಬಳಿಕ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪರಿಚಯವಾಗಿ ಇಂದು ಮದುವೆ ಮುನ್ನುಡಿ ಬರೆದಿದೆ. ಹೊಸ ಜೋಡಿಗೆ ಚಲನಚಿತ್ರದ ಗಣ್ಯರು ಮತ್ತು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande