ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ ೨೦೨೪ ಹೊಸ ವಿಭಾಗ ಆರಂಭ
ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಈ ಬಾರಿಯ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯುವ ನಿರ್ಮಾಪಕರಿಗಾಗಿ ಹೊಸ ವಿಭಾಗವನ್ನು ಆರಂಭಿಸಿದೆ. ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ ೨೦೨೪ ಎಂದು ಕರೆಯಲ್ಪಡುವ ಈ ವೇದಿಕೆ ಯುವ ನ
Best DeBew Indian Film Section


ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಈ ಬಾರಿಯ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯುವ ನಿರ್ಮಾಪಕರಿಗಾಗಿ ಹೊಸ ವಿಭಾಗವನ್ನು ಆರಂಭಿಸಿದೆ.

ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ ೨೦೨೪ ಎಂದು ಕರೆಯಲ್ಪಡುವ ಈ ವೇದಿಕೆ ಯುವ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ತಮ್ಮ ಪ್ರತಿಭೆಯನ್ನು ಸಾದರಪಡಿಸಲು ಅವಕಾಶ ಕಲ್ಪಿಸುತ್ತದೆ.

ಈ ವಿಭಾಗಕ್ಕಾಗಿ ಗರಿಷ್ಠ ೫ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಈ ತಿಂಗಳ ೨೩ ಕೊನೆಯ ದಿನವಾಗಿದೆ. ೫೫ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ ೨೦ ರಿಂದ ೨೮ರ ವರೆಗೆ ಗೋವಾದಲ್ಲಿ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande