ಬಿಡುಗಡೆ​ಗೂ ಮೊದಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದ ‘ದೇವರ’ ಚಲನ ಚಿತ್ರ
ಹೈದರಾಬಾದ್, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಚಲನಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರ ಈಗಾಗಲೇ ದೊಡ್ಡ ಮಟ್ಟದ ವಾಹಿವಾಟು ಮಾಡಿದೆ. ಈ ಚಿತ್ರ ಕೇವಲ ಭಾರತ ಮಾತ್ರವಲ್ಲ
Devara Movie Collects 8 crore in america before


ಹೈದರಾಬಾದ್, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಚಲನಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರ ಈಗಾಗಲೇ ದೊಡ್ಡ ಮಟ್ಟದ ವಾಹಿವಾಟು ಮಾಡಿದೆ. ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ. ಅಮೆರಿಕದಲ್ಲಿ ಈ ಚಲನಚಿತ್ರ ಈಗಾಗಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ.

ತೆಲುಗು ಚಲನಚಿತ್ರಗಳಿಗೆ ಅಮೆರಿಕದಲ್ಲಿ ಸಖತ್ ಬೇಡಿಕೆ ಇದೆ. ಚಲನಚಿತ್ರ ಬಿಡುಗಡೆಗೂ ಕೆಲ ವಾರ ಮೊದಲೇ ಚಿತ್ರಕ್ಕೆ ಮುಂಗಡ ಬುಕಿಂಗ್ ಪ್ರಾರಂಭಿಸಲಾಗುತ್ತದೆ. ಈಗ ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಚಲನಚಿತ್ರಕ್ಕೂ ಅಮೆರಿಕದಲ್ಲಿ ಬುಕಿಂಗ್ ಆರಂಭ ಆಗಿದ್ದು 32 ಸಾವಿರ ಟಿಕೆಟ್​ಗಳು ಮಾರಾಟ ಆಗಿವೆ. ಇದರಿಂದ 8 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಈ ಮೂಲಕ ಚಲನಚಿತ್ರ ದಾಖಲೆ ಬರೆದಿದೆ.

ಕೆಲವು ವರದಿಗಳ ಪ್ರಕಾರ ಅಮೆರಿಕದ 276 ಲೊಕೇಶನ್​ಗಳಲ್ಲಿ ಈ ಚಲನಚಿತ್ರಕ್ಕೆ ಮುಂಗಡ ಬುಕಿಂಗ್ ಆರಂಭ ಆಗಿದೆ. ಭಾರತದ ಅನೇಕರು ಅಮೆರಿಕದಲ್ಲಿ ಇದ್ದಾರೆ. ಅವರು ಮುಗಿಬಿದ್ದು ಚಲನಚಿತ್ರ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ.

‘ದೇವರ’ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಇದೆ. ಇದು ಜೂನಿಯರ್ ಎನ್​ಟಿಆರ್ ಅವರ 30ನೇ ಸಿನಿಮಾ. ಈ ಚಿತ್ರದಲ್ಲಿ ಬಾಲಿವುಡ್​ನ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಎಫ್​ಎಕ್ಸ್​ಗೆ ತಂಡ 140 ಕೋಟಿ ರೂಪಾಯಿ ಖರ್ಚು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande