ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ ವಾಹಗಳಿಗೆ ಭಾರಿ ಸಹಾಯಧನ ಘೋಷಣೆ ಮಾಡಿದ ಕೇಂದ್ರ ಸರಕಾರ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ಕೊಡುವ ಸಲುವಾಗಿ ಸರ್ಕಾರ ಪಿ ಎಂ ಇ-ಸಹಾಯಧನ ಯೋಜನೆ ಚಾಲನೆ ಅನ್ನು ಆರಂಭಿಸಿದೆ. ಅದರಂತೆ ಎಲೆಕ್ಟ್ರಿಕ್ ವಾಹನಗಳಿಗೆ 50,000 ರುವರೆಗೆ ಸಹಾಯಧನ ಸಿಗಲಿದೆ. ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆಯು ನೀಡಿದ ಮಾಹಿತಿ ಪ್
new EV scheme gives Rs 10,000 and Rs 50,000 to e 2-wheeler and 3-wheelers,


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ಕೊಡುವ ಸಲುವಾಗಿ ಸರ್ಕಾರ ಪಿ ಎಂ ಇ-ಸಹಾಯಧನ ಯೋಜನೆ ಚಾಲನೆ ಅನ್ನು ಆರಂಭಿಸಿದೆ. ಅದರಂತೆ ಎಲೆಕ್ಟ್ರಿಕ್ ವಾಹನಗಳಿಗೆ 50,000 ರುವರೆಗೆ ಸಹಾಯಧನ ಸಿಗಲಿದೆ. ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆಯು ನೀಡಿದ ಮಾಹಿತಿ ಪ್ರಕಾರ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ ಸಹಾಯಧನ ಸಿಗಲಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ 50,000 ರೂ ಸಹಾಯಧನ ಸಿಗಲಿದೆ. ಆದರೆ, ಕಾರು ಸೇರಿದಂತೆ ನಾಲ್ಕು ಚಕ್ರದ ಇವಿಗಳಿಗೆ ಸಹಾಯಧನ ಇರುವುದಿಲ್ಲ.

2025-26ರ ಹಣಕಾಸು ವರ್ಷದ ಅಂತ್ಯಕ್ಕೆ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮಾಣ ಶೇ. 10ರಷ್ಟು ಇರಬೇಕು. ತ್ರಿಚಕ್ರ ವಾಹನ ಕ್ಷೇತ್ರದಲ್ಲಿ ಇವಿಗಳ ಸಂಖ್ಯೆ ಶೇ. 15ರಷ್ಟು ಇರಬೇಕು ಎಂಬುದು ಸರ್ಕಾರ ಗುರಿ. ಆ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿದೆ. ಇದರ ಭಾಗವಾಗಿ ಇ-ಡ್ರೈವ್ ಯೋಜನೆ ಹಾಕಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ಈ ಹಣಕಾಸು ವರ್ಷಾಂತ್ಯದವರೆಗೂ ತಲಾ 10,000 ರೂ ಮತ್ತು 50,000 ರೂ ಸಬ್ಸಿಡಿ ಸಿಗಲಿದೆ. ಅದಾದ ಬಳಿಕ, ಅಂದರೆ ಏಪ್ರಿಲ್​ನಿಂದ ಸಹಾಯಧನ ಅರ್ಧದಷ್ಟು ಕಡಿಮೆ ಆಗುತ್ತದೆ. ಅಂದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಸಿಗುವ ಸಬ್ಸಿಡಿ 5,000 ರೂಗೆ ಇಳಿಯಲಿದೆ. ತ್ರಿಚಕ್ರ ವಾಹನಕ್ಕೆ ಸಹಾಯಧನ 25,000 ರೂ ಆಗಲಿದೆ.

ಪಿಎಂ ಇ-ಡ್ರೈವ್ ಯೋಜನೆಯಲ್ಲಿ ಸಹಾಯಧನ ಸೌಲಭ್ಯ ಮಾತ್ರವಲ್ಲ, ಇವಿ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ ಕೊಡಲಾಗುತ್ತದೆ. ಹಿಂದಿನ ಖ್ಯಾತಿಯ ಯೋಜನೆ​ಗಳಲ್ಲಿದ್ದ ನ್ಯೂನತೆಗಳನ್ನು ಈ ಯೋಜನೆ ಮೂಲಕ ಸರಿಪಡಿಸಲಾಗಿದೆ. ದೇಶೀಯವಾಗಿ ತಯಾರಾದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಕೊಡಲಾಗುತ್ತದೆ. ಆದರೆ ಈ ಸೌಲಭ್ಯವನ್ನು ಕೆಲ ಕಾರ್ ಕಂಪನಿಗಳು ದುರ್ಬಳಕೆ ಮಾಡಿಕೊಂಡಿದ್ದಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಇವಿಗಳಿಗೂ ಸಹಾಯಧನ ಕ್ಲೇಮ್ ಮಾಡಲಾಗುತ್ತಿತ್ತು. ಈ ರೀತಿ ಪೋಲಾದ ಹಣವನ್ನು ಮರಳಿ ಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande