ಕೇಂದ್ರದಿಂದ ಪ್ರತಿಯೊಂದು ಕುಟುಂಬಕ್ಕೂ ಸುಲಭ ಬೆಲೆಯಲ್ಲಿ ಈರುಳ್ಳಿ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವುದನ್ನು ಖಾತ್ರಿಪಡಿಸಲು ಸಗಟು ಮಾರಾಟ ಕಾರ್ಯತಂತ್ರ ಅನುಸರಿಸಲಾಗುತ್ತಿದೆ ಎಂದು ವಾಣಿಜ್ಯ ಮತ್ತು ಉದ್ದಿಮೆ ಸಚಿವಾಲಯ ತಿಳಿಸಿದೆ. ಬೇಡಿಕೆ - ಪೂರೈಕೆ ಪರಿಸ್ಥಿತಿ ಹಾಗೂ ಬೆಲೆ ಪ್ರವೃತ್ತಿ ಆಧರಿಸಿ, ಈರು
onions to consumers at affordable price.


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವುದನ್ನು ಖಾತ್ರಿಪಡಿಸಲು ಸಗಟು ಮಾರಾಟ ಕಾರ್ಯತಂತ್ರ ಅನುಸರಿಸಲಾಗುತ್ತಿದೆ ಎಂದು ವಾಣಿಜ್ಯ ಮತ್ತು ಉದ್ದಿಮೆ ಸಚಿವಾಲಯ ತಿಳಿಸಿದೆ. ಬೇಡಿಕೆ - ಪೂರೈಕೆ ಪರಿಸ್ಥಿತಿ ಹಾಗೂ ಬೆಲೆ ಪ್ರವೃತ್ತಿ ಆಧರಿಸಿ, ಈರುಳ್ಳಿಯ ಸುಸ್ಥಿರ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ.

ದೇಶದ ಪ್ರತಿಯೊಂದು ಕುಟುಂಬಕ್ಕೂ ಸುಲಭ ಬೆಲೆಯಲ್ಲಿ ಈರುಳ್ಳಿ ದೊರಕಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಬೆಲೆ ಏರಿಕೆಗೆ ಅವಕಾಶವಾಗದಂತೆ ಗ್ರಾಹಕರ ಹಿತ ಸಂರಕ್ಷಿಸುವುದು ಸರ್ಕಾರದ ಗುರಿಯ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರ ಸಹಾಯಧನದ ಚಿಲ್ಲರೆ ಮಾರಾಟ ಕ್ರಮವನ್ನು ಕೈಗೊಂಡ ನಂತರ ಈರುಳ್ಳಿ ಬೆಲೆಯಲ್ಲಿ ಇಳಿಕೆ ಉಂಟಾಗಿದೆ. ಇದೇ ೫ನೇ ತಾರೀಕಿನಿಂದ ದೇಶದ ಪ್ರಮುಖ ನಗರಗಳಲ್ಲಿ ಸಂಚಾರಿ ವ್ಯಾನ್‌ಗಳ ಮೂಲಕ ೩೫ ರೂಪಾಯಿಗೆ ಪ್ರತಿ ಕೆಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ದೆಹಲಿ, ಮುಂಬೈ ಹಾಗೂ ಚೆನ್ನೈಗಳಲ್ಲಿ ಈ ಸಗಟು ವಿತರಣೆ ನಡೆಯುತ್ತಿದ್ದು, ಇದನ್ನು ಸದ್ಯದಲ್ಲೇ ಹೈದರಾಬಾದ್, ಬೆಂಗಳೂರು ಹಾಗೂ ಕೋಲ್ಕತ್ತಾ ನಗರಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ರಾಜ್ಯದ ರಾಜಧಾನಿಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande