ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್, ಹೊಸ ಯುಪಿಐ ವೈಶಿಷ್ಟ್ಯ
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಯುಪಿಐ ಬಳಸುತ್ತಿರುವವರು ಯುಪಿಐ ಲೈಟ್ ವೈಶಿಷ್ಟ್ಯ ಬಳಸುತ್ತಿರಬಹುದು. ಸಣ್ಣ ಮೊತ್ತದ ಹಣ ವಹಿವಾಟಿಗೆ ಇದು ಬಹಳ ಅನುಕೂಲ ಆಗುತ್ತದೆ. ಪೇಟಿಎಂ, ಫೋನ್​ಪೇ ಮೊದಲಾದ ಕೆಲ ಯುಪಿಐ ವೇದಿಕೆಗಳಲ್ಲಿ ಈ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಭಾರತೀಯ ರಾಷ್ಟ್ರೀಯ ಪಾ
UPI Lite Auto top-up from Oct 31st, know about


ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಯುಪಿಐ ಬಳಸುತ್ತಿರುವವರು ಯುಪಿಐ ಲೈಟ್ ವೈಶಿಷ್ಟ್ಯ ಬಳಸುತ್ತಿರಬಹುದು. ಸಣ್ಣ ಮೊತ್ತದ ಹಣ ವಹಿವಾಟಿಗೆ ಇದು ಬಹಳ ಅನುಕೂಲ ಆಗುತ್ತದೆ. ಪೇಟಿಎಂ, ಫೋನ್​ಪೇ ಮೊದಲಾದ ಕೆಲ ಯುಪಿಐ ವೇದಿಕೆಗಳಲ್ಲಿ ಈ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈಗ ಯುಪಿಐ ಲೈಟ್ ವೈಶಿಷ್ಟ್ಯ ​ನಲ್ಲಿ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಅಕ್ಟೋಬರ್ 31ರಿಂದ ಯುಪಿಐ ವೈಶಿಷ್ಟ್ಯ ಖಾತೆಗೆ​ ಸ್ವಯಂ ಟಾಪ್ ಅಪ್ ಮಾಡುವ ಅವಕಾಶ ಇರಲಿದೆ.

ಸ್ವಯಂ ಟಾಪ್ ಅಪ್ ಎಂದರೆ ಸ್ವಯಂಚಾಲಿತವಾಗಿ ಹಣ ವರ್ಗಾವಣೆ ಆಗುವುದು. ಯುಪಿಐ ಲೈಟ್ ಖಾತೆನಲ್ಲಿ 2,000 ರೂವರೆಗೆ ಹಣ ತುಂಬಿಸಬಹುದು. ಆ ಹಣ ಖಾಲಿಯಾದರೆ ಬ್ಯಾಂಕ್ ಖಾತೆಯಿಂದ ಅದಕ್ಕೆ ಕೈಪಿಡಿ ಮೂಲಕ ಹಣ ತುಂಬಿಸಬೇಕಾಗುತ್ತದೆ. ಸ್ವಯಂಚಾಲಿತವಾಗಿ ಟಾಪ್ ಅಪ್ ಅವಕಾಶ ಇದ್ದರೆ ಯುಪಿಐ ಲೈಟ್ ಖಾತೆಯಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಖಾತೆಯಿಂದ ನೀವು ನಿರ್ದಿಷ್ಟಪಡಿಸಿದ ಮೊತ್ತದಷ್ಟು ಹಣ ತನ್ನಂತಾನೆ ವರ್ಗಾವಣೆ ಆಗುತ್ತದೆ. ಒಟ್ಟಾರೆ ಯುಪಿಐ ಲೈಟ್ ಖಾತೆನಲ್ಲಿ ಇರುವ ಹಣ 2,000 ರೂ ಮೀರಿರಬಾರದು ಅಷ್ಟೇ.

ಯುಪಿಐ ಲೈಟ್ ವೈಶಿಷ್ಟ್ಯ ಎಂಬುದು ವ್ಯಾಲಟ್ ರೀತಿ ಕೆಲಸ ಮಾಡುತ್ತದೆ. ಆದರೆ ಪ್ರಮುಖ ವ್ಯತ್ಯಾಸ ಎಂದರೆ ಲೈಟ್ ವೈಶಿಷ್ಟ್ಯ​ನಲ್ಲಿ ನೀವು ಯಾವುದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವ್ಯಾಲಟ್ ಆದರೆ ಅದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಳಸಬಹುದು.

ಈ ಯುಪಿಯ ಲೈಟ್​ನ ಆಟೊ ಟಾಪ್ ಅಪ್ ಫೀಚರ್ 2024ರ ಅಕ್ಟೋಬರ್ 31ರಿಂದ ಸಕ್ರಿಯಗೊಳ್ಳುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande