ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ


ಕೋಲಾರ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಸೆಪ್ಟೆಂಬರ್ ೧೧ ಮತ್ತು ೧೨ ರಂದು ಕೋಲಾರ ಜಿಲ್ಲಾ ಪ್ರವಾಸ ಕೈಗೊಳ್ಳುವರು.

ಸೆ.೧೧ ರಂದು ಬೆಳಿಗ್ಗೆ ೯.೩೦ಕ್ಕೆ ಕೋಲಾರಮ್ಮ ದೇವಾಸ್ಥಾನಕ್ಕೆ ಭೇಟಿ ನೀಡುವರು. ನಂತರ ೧೧.೪೫ಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವರು ಹಾಗೂ ಮಧ್ಯಾಹ್ನ ೧೨.೩೦ಕ್ಕೆ ಹಕ್ಕಿಪಿಕ್ಕಿ ಕಾಲೋನಿಗೆ ಭೇಟಿ ನೀಡಿ,

ಸಂಜೆ ೪.೩೦ಕ್ಕೆ ಕೋಲಾರದ ಡಾ.ಬಿ.ಆರ್ ಅಂಬೇಡ್ಕರ್ ಪೋಸ್ಟ್ ಮೆಟ್ರಿಕ್ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡುವರು ಹಾಗೂ ಸಂಜೆ ೫ ಗಂಟೆಗೆ ತೊಟ್ಲಿ ಪಂಚಾಯತ್ ಉರುಟಿ ಅಗ್ರಹಾರದಲ್ಲಿ ಹೆಣ್ಣುಮಕ್ಕಳ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳುವರು.

ಸೆ.೧೨ ರಂದು ಬೆಳಿಗ್ಗೆ ೯.೩೦ಕ್ಕೆ ಕೋಲಾರ ಜಿಲ್ಲಾ ಆಸ್ಪತ್ರಗೆ ಭೇಟಿ ನೀಡುವರು. ನಂತರ ೧೧ ಗಂಟೆಗೆ ಬಂಗಾರಪೇಟೆ ತಾಲ್ಲೂಕಿನ ವಟ್ಟರಕುಂಟೆಯ ಚಿಕ್ಕ ಅಂಕಂಡಹಳ್ಳಿ ಎಚ್.ಡಬ್ಲೂಯ,ಸಿಯಲ್ಲಿ ಮಹಿಳೆಯರಿಗಾಗಿ ಆಯೋಜಿಸಿರುವ ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡುವರು. ಮಧ್ಯಾಹ್ನ ೧೨.೩೦ಕ್ಕೆ ಬಂಗಾರಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಕೆ.ಜಿ.ಎಫ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡುವರು.

ನಂತರ ಮ.೩.೩೦ಕ್ಕೆ ಕೆ.ಜಿ.ಎಫ್‌ನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡುವರು ಹಾಗೂ ಸಂಜೆ ೫ ಗಂಟೆಗೆ ಕೋಲಾರದಲ್ಲಿ ಮೃತಪಟ್ಟಿರುವ ಮಾನಸ ಅವರ ಮನೆಗೆ ಭೇಟಿ ನೀಡಿವರು. ನಂತರ ಬೆಂಗಳೂರಿಗೆ ತೆರಳುವರು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ.ಸಂ.೦೮೦-೨೨೨೧೬೪೮೬, ಆಪ್ತ ಸಹಾಯಕ ಅಧ್ಯಕ್ಷ ಎ.ಕಿರಣ್ ೯೬೩೨೩೨೪೧೬೬ಯನ್ನು ಸಂಪರ್ಕಿಸಬಹುದು ಎಂದು ಕ.ರಾ.ಮ.ಆ ಅಧ್ಯಕ್ಷರ ಅಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande