ಇಂದು ಬರ್ಲಿನ್‌ಗೆ ಸಚಿವ ಡಾ.ಎಸ್.ಜೈಶಂಕರ್ ಭೇಟಿ
ಬರ್ಲಿನ್‌, 10 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸೌದಿಅರೇಬಿಯಾ ಪ್ರವಾಸದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಎರಡು ದಿನಗಳ ಜರ್ಮನಿ ಭೇಟಿಗಾಗಿ ಇಂದು ಜರ್ಮನಿಯ ರಾಜಧಾನಿ ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಜರ್ಮನ್ ಫೆಡರಲ್‌ನ ವಿದೇಶಾಂಗ ಸಚಿವ ಹಾಗೂ ಇತರ ಪ್ರಮು
S Jaishankar


ಬರ್ಲಿನ್‌, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸೌದಿಅರೇಬಿಯಾ ಪ್ರವಾಸದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಎರಡು ದಿನಗಳ ಜರ್ಮನಿ ಭೇಟಿಗಾಗಿ ಇಂದು ಜರ್ಮನಿಯ ರಾಜಧಾನಿ ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಅವರು ಜರ್ಮನ್ ಫೆಡರಲ್‌ನ ವಿದೇಶಾಂಗ ಸಚಿವ ಹಾಗೂ ಇತರ ಪ್ರಮುಖ ನಾಯರನ್ನು ಭೇಟಿ ಮಾಡಲಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಪ್ರಗತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಿದ್ದಾರೆ.

ಮುಂದಿನ ತಿಂಗಳು ಜರ್ಮನ್ ಚಾನ್ಸಲರ್ ಒಲಾಫ್ ಸೋಲ್ಜ್ ಅವರ ಭಾರತ ಭೇಟಿ ಹಿನ್ನೆಲೆಯಲ್ಲಿ ಅಗತ್ಯ ಭೂಮಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಬರ್ಲಿನ್ ಭೇಟಿ ಪೂರಕವಾಗಲಿದೆ.

ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮುಖ ರಾಷ್ಟ್ರವಾಗಿ ಜರ್ಮನಿ ಹೊರಹೊಮ್ಮಿದೆ. ಜರ್ಮನಿ ಪ್ರವಾಸದ ನಂತರ ಡಾ.ಜೈಶಂಕರ್ ಇದೇ ೧೨ರಂದು ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande