ಕೊಲಂಬಿಯಾ:  ವಿಮಾನ ಅಪಘಾತದಲ್ಲಿ 10 ಮಂದಿ ಸಾವು
ಬೊಗೋಟಾ, 11 ಜನವರಿ (ಹಿ.ಸ.) : ಆ್ಯಂಕರ್ : ಕೊಲಂಬಿಯಾದ ವಾಯುವ್ಯ ಕೊಲಂಬಿಯಾದಲ್ಲಿ ಸಣ್ಣ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಪೆಸಿಫಿಕಾ ಟ್ರಾವೆಲ್ ನಿರ್ವಹಿಸುತ್ತಿದ್ದ ವಿಮಾನವು ಕಳೆದ ಬುಧವಾರ ಜುರಾಡೊದಿಂದ ಮೆಡೆಲಿನ್‌ಗೆ ಹೋಗುವ ಮಾರ್ಗದಲ್ಲಿ ನಾಪತ್ತೆಯಾಗಿದ್ದು, ಇದೀಗ
ಕೊಲಂಬಿಯಾ:  ವಿಮಾನ ಅಪಘಾತದಲ್ಲಿ 10 ಮಂದಿ ಸಾವು


ಬೊಗೋಟಾ, 11 ಜನವರಿ (ಹಿ.ಸ.) :

ಆ್ಯಂಕರ್ :

ಕೊಲಂಬಿಯಾದ ವಾಯುವ್ಯ ಕೊಲಂಬಿಯಾದಲ್ಲಿ ಸಣ್ಣ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.

ಪೆಸಿಫಿಕಾ ಟ್ರಾವೆಲ್ ನಿರ್ವಹಿಸುತ್ತಿದ್ದ ವಿಮಾನವು ಕಳೆದ ಬುಧವಾರ ಜುರಾಡೊದಿಂದ ಮೆಡೆಲಿನ್‌ಗೆ ಹೋಗುವ ಮಾರ್ಗದಲ್ಲಿ ನಾಪತ್ತೆಯಾಗಿದ್ದು, ಇದೀಗ ವಾಯುವ್ಯ ಕೊಲಂಬಿಯಾದ ಆಂಟಿಯೋಕ್ವಿಯಾ ವ್ಯಾಪ್ತಿಯ ಪುರಸಭೆಯಾದ ಉರ್ರಾವ್‌ನ ಗ್ರಾಮೀಣ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಇಬ್ಬರು ವಿಮಾನಯಾನ ಸಿಬ್ಬಂದಿ ಮತ್ತು ಎಂಟು ಜನ ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ಹೊರತೆಗೆಯುವ ಮತ್ತು ಇತರ ಕಾರ್ಯಚರಣೆಯ ಕೆಲಸ ನಡೆಯುತ್ತಿದೆ. ಕೊಲಂಬಿಯಾದ ಸಾರಿಗೆ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರವು ಅಪಘಾತದಲ್ಲಿ ಮೃತಪಟ್ಟ 10 ಮಂದಿಗೆ ಸಂತಾಪ ಸಂತಾಪ ಸೂಚಿಸಿದೆ. ಅಪಘಾತದ ಕಾರಣವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ಪ್ರಾಧಿಕಾರವು ತನಿಖೆಯನ್ನು ಪ್ರಾರಂಭಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande