ಅಮೆರಿಕದಲ್ಲಿ ಕಾಡ್ಗಿಚ್ಚು : ಹೆಚ್ಚುತ್ತಿರುವ ಸಾವಿನ ಸಂಖ್ಯೆ
೧ ಲಕ್ಷಕ್ಕೂ ಅಧಿಕ ನಿವಾಸಿಗಳಿಗೆ  ಸ್ಥಳಾಂತರ
ಹೆಚ್ಚುತ್ತಿರುವ ಸಾವಿನ ಸಂಖ್ಯೆ


ಲಾಸ್ ಎಂಜಲಿಸ್,12 ಜನವರಿ (ಹಿ.ಸ.) :

ಆ್ಯಂಕರ್ :ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಎಂಜಲಿಸ್ ಸುತ್ತಮುತ್ತ ಕಾಡ್ಗಿಚ್ಚು ಸಂಭವಿಸಿದ್ದು, ಸಾವನ್ನಪ್ಪಿದವರ ಸಂಖ್ಯೆ ೧೬ಕ್ಕೆ ಏರಿಕೆಯಾಗಿದೆ.

ಪ್ರಮುಖವಾಗಿ ಲಾಸ್ ಎಂಜಲಸ್ ಬಳಿಯ ಈಟಾನ್, ಹರ್ಸ್ಟ್, ಕೆನೆತ್ ಮತ್ತು ಪಾಲಿಸೇಡ್ಸ್ ಪ್ರದೇಶಗಳಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಸುಮಾರು ೩೮ ಸಾವಿರದ ೨೭೬ ಎಕರೆ ಪ್ರದೇಶಗಳಾದ್ಯಂತ ಬೆಂಕೆ ವ್ಯಾಪಿಸಿದೆ. ಹಾಲಿವುಡ್‌ ಹಿಲ್ಸ್‌ನಲ್ಲಿ ಅನೇಕ ​ನಟ ನಟಿಯರ, ಗಾಯಕರ ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಇದರ ಪರಿಣಾಮ ಸುಮಾರು ೧೨ ಸಾವಿರಕ್ಕೂ ಅಧಿಕ ಮನೆ ಹಾಗೂ ಇತರೆ ಕಟ್ಟಡಗಳು ದ್ವಂಸಗೊಂಡಿವೆ. ೧ ಲಕ್ಷಕ್ಕೂ ಅಧಿಕ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande