ಪ್ರಯಾಗ್‌ರಾಜ್,13 ಜನವರಿ (ಹಿ.ಸ.) :
ಆ್ಯಂಕರ್ :
ಪ್ರಪಂಚದಾದ್ಯಂತದ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ.
2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಹಾಗೂ 45 ದಿನಗಳ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಗಮದ ಅತಿ ದೊಡ್ಡ ಮೇಳವಾಗಿದೆ. ಈ ಮೇಳದಲ್ಲಿ ಸ್ಪೇನ್, ಬ್ರೆಜಿಲ್, ಪೋರ್ಚುಗಲ್‌ನಿಂದ ಅನೇಕ ವಿದೇಶಿಗಳಿಂದ ಭಕ್ತರು ಆಗಮಿಸಿ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ.
ಸಂಗಮದ ದಡ ಸೇರಿದಂತೆ ಸುಮಾರು 12 ಕಿ.ಮೀ ಪ್ರದೇಶದಲ್ಲಿ ಸ್ನಾನಘಟ್ಟ ನಿರ್ಮಿಸಲಾಗಿದೆ. ಸಂಗಮದ ಎಲ್ಲಾ ಪ್ರವೇಶ ಮಾರ್ಗಗಳಲ್ಲಿ ಭಕ್ತರ ದಂಡೇ ಇದೆ.ವಿದೇಶಿ ಭಕ್ತರೂ ತೀವ್ರ ಚಳಿಯಲ್ಲಿ ಮುಳುಗಿ ಪುಣ್ಯ ಸ್ನಾನವನ್ನು ಮಾಡಿದ್ದಾರೆ.
ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮತ್ತು ಪೂಜೆ ನೆರವೇರಿಸಿದ ಸ್ಪ್ಯಾನಿಷ್ ಭಕ್ತ ಸಂಡ್ರಾಕ್ಸ್ ವಿಕ್ ಸಗ್, ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಆಧ್ಯಾತ್ಮಿಕ ಪ್ರವಾಸದಲ್ಲಿದ್ದೇವೆ. ಭಾರತವು ಪ್ರಪಂಚದ ಆಧ್ಯಾತ್ಮಿಕ ಹೃದಯವಾಗಿದೆ. ನಾವು ಇಲ್ಲಿ ಅನೇಕ ಸ್ನೇಹಿತರೊಂದಿಗೆ ಬಂದಿದ್ದು, ಬೆಳಿಗ್ಗೆ ಪೂಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಮಾಡಲಾಗಿದೆ.ನಾನು ಪವಿತ್ರ ಸ್ನಾನ ಮಾಡಿದಾಗ ತುಂಬಾ ಆನಂದ ಪಟ್ಟೆ, ನಾನು ತುಂಬಾ ಅದೃಷ್ಟಶಾಲಿ. ಎಂದು ಹೇಳಿದರು.
ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನಿಕ್ಕಿಯಲ್ಲಿರುವ ಭಕ್ತೆ ಕೇವಿಯಾಚ್ ಭಕ್ತರೊಬ್ಬರು, ಇದು ತುಂಬಾ ಶಕ್ತಿಶಾಲಿಯಾಗಿದೆ ಮತ್ತು ನಾವು ಇಲ್ಲಿ ಗಂಗಾ ನದಿಯಲ್ಲಿರುವುದು ತುಂಬಾ ಧನ್ಯರು ಎಂದು ಹೇಳಿದರು.
ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಮಹಾಕುಂಭ ಮೇಳಕ್ಕೆ ತಲುಪಿದ್ದಾರೆ. ಅವರು ನಿರಂಜನಿ ಅಖಾಡದಲ್ಲಿ ಆಚರಣೆಗಳನ್ನು ಮಾಡಿದರು. ಪೂಣ್ಯ ಸ್ನಾನ ಮಾಡಿ ವಿಶೇಷ ಪೂಜೆ ನೆರವೇರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV