ವಿನಯ್ ರಾಜ್​ಕುಮಾರ್ ನಟನೆಯ ಪೆಪೆ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್
ಬೆಂಗಳೂರು, 28 ಜುಲೈ (ಹಿ.ಸ.) : ಆ್ಯಂಕರ್ : ವಿನಯ್ ರಾಜ್​ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕತೆ’ ಚಲನ ಚಿತ್ರವು ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಲನ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು. ಇದೇ ಖು
Vinay Rajkumar starrer Pepe Movie


ಬೆಂಗಳೂರು, 28 ಜುಲೈ (ಹಿ.ಸ.) :

ಆ್ಯಂಕರ್ : ವಿನಯ್ ರಾಜ್​ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕತೆ’ ಚಲನ ಚಿತ್ರವು ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಲನ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು. ಇದೇ ಖುಷಿಯಲ್ಲಿ ವಿನಯ್ ರಾಜ್​ಕುಮಾರ್ ನಟನೆಯ ಹೊಸ ಸಿನಿಮಾ ಒಂದು ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್ ದೊರೆತಿದೆ.

ಇದಕ್ಕೆ ಕಾರಣ ಸಿನಿಮಾದಲ್ಲಿರುವ ಕಚ್ಚಾತನ ಎನ್ನಲಾಗುತ್ತಿದೆ.

ವಿನಯ್ ರಾಜ್​ಕುಮಾರ್ ನಟನೆಯ ‘ಪೆಪೆ’ ಚಲನ ಚಿತ್ರಕ್ಕೆ ಇದೀಗ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಷನ್ ನೀಡಿದೆ. ಚಲನ ಚಿತ್ರವನ್ನು ವಯಸ್ಕರು ಮಾತ್ರವೇ ನೋಡಬೇಕಿದೆ. ಸಿನಿಮಾದಲ್ಲಿರುವ ಕಚ್ಚಾತನ, ಹಿಂಸೆಯಿಂದ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಷನ್ ದೊರೆತಿದೆ.

ತಮ್ಮ ಹಿಂದಿನ ಚಲನ ಚಿತ್ರ ‘ಒಂದು ಸರಳ ಪ್ರೇಮಕಥೆ’ ಚಲನ ಚಿತ್ರದಲ್ಲಿ ಪ್ರತಿ ಮಾಡುವ ಹುಡುಗ ಆಗಿ, ಸರಳ ಯುವಕನಾಗಿ ಗಮನ ಸೆಳೆದಿದ್ದ ನಟ ವಿನಯ್ ರಾಜ್​ಕುಮಾರ್, ಈಗ ‘ಪೆಪೆ’ ಚಲನ ಚಿತ್ರದಲ್ಲಿ ರಗಡ್ ಆಗಿ ಅಬ್ಬರಿಸಲಿದ್ದಾರೆ.

‘ಪೆಪೆ’ ಚಲನ ಚಿತ್ರವು ಹಳ್ಳಿಗಾಡಿನ ಯುವಕನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ವಿನಯ್ ರಾಜ್​ಕುಮಾರ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಲನ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮೇದಿನಿ ಕೆಳಮನೆ, ಮಯೂರ್ ಪಟೇಲ್, ಬಲ ರಾಜವಾಡಿ, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಇನ್ನೂ ಹಲವರು ನಟಿಸಿದ್ದಾರೆ. ಚಲನ ಚಿತ್ರ ವನ್ನು ಯುವ ನಿರ್ದೇಶಕ ಬಿಎಂ ಶ್ರೀರಾಮ್ ನಿರ್ದೇಶನ ಮಾಡಿದ್ದು, ನಿರ್ಮಾಣವನ್ನು ಉದಯ ಶಂಕರ್ ನಿರ್ಮಾಣ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande