
ಬೆಂಗಳೂರು, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಮತ್ತೊಂದು ಟೀಸರ್ ಮೂಲಕ ಸಿನಿಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
‘ರಾಯ್’ ಪಾತ್ರದ ಅನಾವರಣ ಮಾಡಿದ್ದ ಮೊದಲ ಟೀಸರ್ ನಂತರ, ಇಂದು ಬಿಡುಗಡೆಯಾದ ಹೊಸ ಟೀಸರ್ ಚಿತ್ರಕ್ಕೆ ಇನ್ನಷ್ಟು ಪ್ರೋತ್ಸಾಹ ತಂದಿದೆ.
“ಈ ಸಲ ಯುದ್ಧನೇ ಬೇರೆ” ಎಂಬ ಸಂಭಾಷಣೆಯೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ ಬುಲೆಟ್ ಶಬ್ದ, ಫೈರಿಂಗ್, ತಂತ್ರ–ಕುತಂತ್ರ, ಜ್ವಾಲೆ ಹಾಗೂ ಸೇಡಿನ ಅಂಶಗಳು ಝಳಕಿಸಿವೆ.
ಸುಮಾರು 1.54 ನಿಮಿಷಗಳ ಈ ಟೀಸರ್‌ನಲ್ಲಿ ಯಶ್ ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದು, ದೈತ್ಯಾಕಾರದ ಮಾಸ್ ಅವತಾರ ಗಮನ ಸೆಳೆದಿದೆ. ಭರ್ಜರಿ ಆಕ್ಷನ್ ಸನ್ನಿವೇಶಗಳು ಹಾಗೂ ಗಾಢ ಹಿನ್ನೆಲೆ ಸಂಗೀತ ಟೀಸರ್‌ಗೆ ಇನ್ನಷ್ಟು ತೀವ್ರತೆ ನೀಡಿವೆ.
ಚಿತ್ರವು ಒಟ್ಟು 6 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa