ಕೊಪ್ಪಳ , 19 ಜುಲೈ (ಹಿ.ಸ.) :
ಆ್ಯಂಕರ್ : ಹೆದ್ದಾರಿ ಪಹರೆ ಕರ್ತವ್ಯ ನಡೆಸುತ್ತಿದ್ದಾಗ ಅಪರಿಚಿತ ವಾಹನವೊಂದು ಗುದ್ದಿಕೊಂಡು ಹೋದ ಪರಿಣಾಮ ಎಎಸ್ಐ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಪ್ಪಳ ತಾಲೂಕಿನ ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮುನಿರಾಬಾದ್ ಪೊಲೀಸ್ ಠಾಣೆಯ ಎಎಸ್ಐ ರಾಮಣ್ಣ (54) ಸಾವನ್ನಪ್ಪಿದವರು. ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎಸ್ಐ ಹೆದ್ದಾರಿಯಲ್ಲಿ ಪಹರೆ ಕರ್ತವ್ಯ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅಧಿಕಾರಿಗೆ ಗುದ್ದಿಕೊಂಡು ಹೋಗಿದೆ. ಹೀಗಾಗಿ ಸ್ಥಳದಲ್ಲೇ ಅಧಿಕಾರಿ ಮೃತಪಟ್ಟಿದ್ದಾರೆ. ವಾಹನ ಗುದ್ದಿದ ರಭಸಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತೆ ಆಗಿದೆ.ಇಂದು ಬೆಳಗ್ಗೆ ಸರಿ ಸುಮಾರು 3:00 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಾಮ್.ಎಲ್ ಅರೆಸಿದ್ದಿ ಹಾಗೂ ಸಿಪಿಐ ಸುರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತುಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ