ಸತತ 6 ಗಂಟೆಗಳ ಕಾಲ ಗುಂಡಿನ ಕಾಳಗ.. 12 ನಕ್ಸಲರು ಹತ್ಯೆ
ಗಡ್ಚಿರೋಲಿ, 18 ಜುಲೈ (ಹಿ.ಸ.) : ಆ್ಯಂಕರ್ :ಮಹಾರಾಷ್ಟ್ರ ಮತ್ತು ಛತ್ತೀಸ್​​ಗಢ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಕ್ಸಲರ ಮಧ್ಯೆ ಭಾರೀ ಗುಂಡಿನ ಕಾಳಗ ನಡೆದಿದೆ. ಗನ್​ಫೈಟ್​ನಲ್ಲಿ ಒಟ್ಟು 12 ನಕ್ಸಲರನ್ನು ಎನ್​ಕೌಂಟರ್ ಮಾಡಲಾಗಿದೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಮತ್ತೋರ್ವ ಯೋಧ ಗಾಯಗೊಂಡ
/12-naxals-killed-in-encounter/


ಗಡ್ಚಿರೋಲಿ, 18 ಜುಲೈ (ಹಿ.ಸ.) :

ಆ್ಯಂಕರ್ :ಮಹಾರಾಷ್ಟ್ರ ಮತ್ತು ಛತ್ತೀಸ್​​ಗಢ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಕ್ಸಲರ ಮಧ್ಯೆ ಭಾರೀ ಗುಂಡಿನ ಕಾಳಗ ನಡೆದಿದೆ. ಗನ್​ಫೈಟ್​ನಲ್ಲಿ ಒಟ್ಟು 12 ನಕ್ಸಲರನ್ನು ಎನ್​ಕೌಂಟರ್ ಮಾಡಲಾಗಿದೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗುಂಡಿನ ಕಾಳಗ ನಡೆದಿದೆ.

ನಿನ್ನೆ ಕಾರ್ಯಾಚರಣೆ ಶುರುವಾಗಿತ್ತು. ಸಿ60 ಕಾಮಾಂಡೋ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಛತ್ತೀಸ್​ಗಢ ಗಡಿಯ ವಂಡೊಲಿ ಗ್ರಾಮದಲ್ಲಿ 12-15 ನಕ್ಸಲರು ಅಡಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರುವಾಗಿತ್ತು. ಸಂಜೆ ವೇಳೆಗೆ ಗುಂಡಿನ ಕಾಳಗ ಜೋರಾಗಿದ್ದು, ಸತತ 6 ಗಂಟೆಗಳ ಕಾಲ ಕೂಂಬಿಂಗ್ ನಡೆದಿತ್ತು. ರಾತ್ರಿ ವೇಳೆಗೆ 12 ನಕ್ಸಲರ ಮೃತದೇಹಗಳು ಸಿಕ್ಕಿವೆ. ಅದೇ ಜಾಗದಲ್ಲಿ ನಕ್ಸಲರು ಇಟ್ಕೊಂಡಿದ್ದ 7 ಅಟೋಮ್ಯಾಟಿಕ್ ವೆಪನ್ಸ್​, ಮೂರು ಎಕೆ-47, ಎರಡು ಐ ಎನ್ ಎಸ್ ಎ ಎಸ್ ರೈಫಲ್ಸ್ ಸೇರಿದಂತೆ ಅನೇಕ ಅಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲ್ ಕಮಾಂಡರ್ ಡಿವಿಸಿಎಂ ಲಕ್ಷ್ಮಣ್ ಅತ್ರಮ್, ವಿಶಾಲ್ ಅತ್ರಮ್​ನ ಹತ್ಯೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande