ಎಎಪಿಯಿಂದ ಜೈಲ್ ಕಾ ಜವಾಬ್ ವೋಟ್ ಸೆ ಅಭಿಯಾನ
ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್:ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿ
i-party-releases-rap-song-jail-ka-jawab-vote-se/


ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್:ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯ ಲಕ್ಷ್ಮೀನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.ಕೇಜ್ರಿ ಅವರ ಗೈರಿನಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪ್ರಚಾರದ ನೇತೃತ್ವ ವಹಿಸಿರುವ ಸಂದರ್ಭದಲ್ಲೇ ಎಎಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಆಮ್ ಆದ್ಮಿ ಪಕ್ಷದ (ಎಎಪಿ) ಜೈಲ್ ಕಾ ಜವಾಬ್ ವೋಟ್ ಸೆ ಅಭಿಯಾನದ ಭಾಗವಾಗಿ ಪೂರ್ವ ದೆಹಲಿ ಪ್ರದೇಶದ ಟ್ ಓವರ್ ಬ್ರಿಡ್ಜ್ ಬಳಿ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಿಜೆಪಿ ತೋರಿದ ಸರ್ವಾಧಿಕಾರ ಮತ್ತು ಕೇಜ್ರಿವಾಲ್ ಬಂಧನಕ್ಕೆ ತಕ್ಕ ಉತ್ತರ ನೀಡಲು ದೆಹಲಿಯ ಜನತೆ ಸಿದ್ಧರಾಗಿದ್ದಾರೆ ಎಂದು ಸುನೀತಾ ಕೇಜ್ರಿವಾಲ್ ಶನಿವಾರ ಪ್ರಚಾರ ನಡೆಸಲಿರುವ ಎಎಪಿಯ ಪೂರ್ವ ದೆಹಲಿ ಲೋಕಸಭಾ ಚುನಾವಣಾ ಅಭ್ಯರ್ಥಿ ಕುಲದೀಪ್ ಕುಮಾರ್ ತಿಳಿಸಿದ್ದಾರೆ.

ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಎಪಿ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಜೈಲ್ ಕಾ ಜವಾಬ್ ವೋಟ್ ಸೇ ಘೋಷಣೆ ಕೂಗಿದರು.

ಹಿಂದೂಸ್ತಾನ್ ಸಮಾಚಾರ್


 rajesh pande