ಅಯೋಧ್ಯೆಗೆ ಕೇರಳ ರಾಜ್ಯಪಾಲ ಮೊಹಮ್ಮದ್ ಆರೀಫ್ ಭೇಟಿ
ಅಯೋಧ್ಯಾ, 9 ಮೇ (ಹಿ.ಸ):ಆ್ಯಂಕರ್: ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಸದಾ ಕೆಂಡಕಾರುತ್ತಾ ಸುದ್ದಿಯಲ್ಲಿರುವ
 ಮೊಹಮ್ಮದ್ ಆರೀಫ್


ಅಯೋಧ್ಯಾ, 9 ಮೇ (ಹಿ.ಸ):ಆ್ಯಂಕರ್: ಕೇರಳದ ಎಡಪಂಥೀಯ ಸರ್ಕಾರದ ವಿರುದ್ಧ ಸದಾ ಕೆಂಡಕಾರುತ್ತಾ ಸುದ್ದಿಯಲ್ಲಿರುವ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಇಂದು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿದ ರಾಜ್ಯಪಾಲ ಮೊಹಮ್ಮದ್ ಆರೀಫ್ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮನ ದರ್ಶನ ಪಡೆದು ರಾಮಲಲ್ಲಾನ ಮುಂದೆ ತಲೆಬಾಗಿ ನಮಸ್ಕರಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜೈಶ್ರೀರಾಮ್ ಎಂಬ ಘೋಷಣೆಗಳ ನಡುವೆ ಕೇರಳ ಗವರ್ನರ್ ಮೊಹಮ್ಮದ್ ಆರೀಫ್ ಅಯೋಧ್ಯೆ ಶ್ರೀರಾಮನ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆಗೆ ಬಂದು ಶ್ರೀರಾಮನ ಪೂಜೆ ಮಾಡುವುದು ನನಗೆ ಹೆಮ್ಮೆಯ ವಿಚಾರ, ನಾನು ಕಳೆದ ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದೆ. ಅಂದು ಯಾವ ಭಾವನೆ ಇತ್ತೋ ಇಂದು ಅದೇ ಭಾವನೆ ಇದೆ. ಹಲವು ಬಾರಿ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೇನೆ. ಇದು ನಮಗೆ ಬರೀ ಖುಷಿಯ ವಿಚಾರ ಅಲ್ಲ, ಅಯೋಧ್ಯೆಗೆ ಬಂದು ಶ್ರೀರಾಮನ ಆರಾಧನೆ ಮಾಡುವುದು ನಮಗೆ ಹೆಮ್ಮೆಯ ವಿಚಾರ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande