ಚರ್ಚೆಗೆ ಬರುವಂತೆ ರಾಹುಲ್-ಪ್ರಿಯಾಂಕಾಕೆ ಸ್ಮೃತಿ ಇರಾನಿ ಪಂಥಾಹ್ವಾನ
ನವದೆಹಲಿ, 9 ಮೇ (ಹಿ.ಸ):ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಿಷಯಗಳ ಬಗ್ಗೆ ಮಾತನಾಡುವುದಿ
ranis-open-debate-challenge-to-gandhi-siblings


ನವದೆಹಲಿ, 9 ಮೇ (ಹಿ.ಸ):ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಸವಾಲೆಸೆದಿರುವ ಸ್ಮೃತಿ ಚರ್ಚೆಗೆ ಸ್ಥಳ, ಆ್ಯಂಕರ್, ಸುದ್ದಿವಾಹಿನಿ, ಸಮಯವನ್ನು ಅಂತಿಮಗೊಳಿಸುವಂತೆ ಕೇಳಿದ್ದಾರೆ.

ಒಂದೆಡೆ ಸಹೋದರ-ಸಹೋದರಿ ಮತ್ತೊಂದೆಡೆ ಬಿಜೆಪಿಯ ವಕ್ತಾರರು ಇರುತ್ತಾರೆ, ನಮ್ಮ ಪಕ್ಷದಿಂದ ಎಲ್ಲವೂ ಸ್ಪಷ್ಟವಾಗುತ್ತದೆ ಎಂದರು. ಅಮೇಥಿಯಲ್ಲಿ, ಸ್ಮೃತಿ ಇರಾನಿ 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು 55,000 ಮತಗಳಿಂದ ಸೋಲಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ ಮತ್ತು ಕುಟುಂಬದ ಆಪ್ತ ಸಹಾಯಕ ಕಿಶೋರಿ ಲಾಲ್ ಶರ್ಮಾ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಲ್ಲಿ ಬಿಡಾರ ಹೂಡಿದ್ದಾರೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರದಿಂದ (ಮೇ 6) ರಾಯಬರೇಲಿಯಲ್ಲಿ ಮೊಕ್ಕಾಂ ಹೂಡಿದ್ದು, ಚುನಾವಣಾ ಕಾರ್ಯತಂತ್ರ, ನಿರ್ವಹಣೆಯಿಂದ ಚುನಾವಣಾ ಕಣವನ್ನು ಮುನ್ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande