ಆರ್ಚರಿ ವಿಶ್ವಕಪ್ ಪಂದ್ಯಾವಳಿ, ಭಾರತದ ಜ್ಯೋತಿ - ಅಭಿಷೇಕ್ ಜೋಡಿ ಅಂತಿಮ ಪ್ರವೇಶ
ಶಾಂಘೈ, 27 ಏಪ್ರಿಲ್ (ಹಿ.ಸ):ಆ್ಯಂಕರ್: ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರ
ಭಾರತದ ಜ್ಯೋತಿ ವೆನ್ನಂ ಮತ್ತು ಅಭಿಷೇಕ್ ವರ್ಮಾ ಜೋಡಿ


ಶಾಂಘೈ, 27 ಏಪ್ರಿಲ್ (ಹಿ.ಸ):ಆ್ಯಂಕರ್:

ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಜ್ಯೋತಿ ವೆನ್ನಂ ಮತ್ತು ಅಭಿಷೇಕ್ ವರ್ಮಾ ಜೋಡಿ ಫೈನಲ್ ಪ್ರವೇಶಿಸಿದೆ. ಆರ್ಚರಿಯಲ್ಲಿ ಭಾರತಕ್ಕೆ ನಾಲ್ಕನೇ ಪದಕ ಖಚಿತವಾಗಿದೆ. ಸೆಮಿಫೈನಲ್ಸ್ ನಲ್ಲಿ ಭಾರತದ ಜೋಡಿ, ಮೆಕ್ಸಿಕನ್ ಜೋಡಿ ಅಂಡ್ರಿಯಾ ಬೆಕೆರಾ ಮತ್ತು ಲಾಟ್ ಮ್ಯಾಕ್ಸಿಮೋ ಮೆಂಡರ್ಜ್ ಆರ್ಟಿಸ್ ವಿರುದ್ಧ ೧೫೫-೧೫೧ ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜ್ಯೋತಿ ಮತ್ತು ಅಭಿಷೇಕ್ ಎಸ್ಟೋನಿಯಾದ ರಾಬಿನ್ ಜಾತ್ಮಾ ಮತ್ತು ಲಿಸಲ್ ಜಾತ್ಮಾ ಅವರ ನಡುವೆ ಸ್ಪರ್ಣ ಪದಕಕ್ಕಾಗಿ ಹಣಾಹಣಿ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande