ಐಪಿಎಲ್ ನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್-ರಾಜಸ್ಥಾನ್ ರಾಯಲ್ಸ್ ಸೆಣೆಸಾಟ
ನವದೆಹಲಿ, 7 ಮೇ (ಹಿ.ಸ):ಆ್ಯಂಕರ್:ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿ ರೋಚಕ ಘಟ್ಟಕ್ಕೆ ತಲುಪುತ್ತಿದೆ
-rishabh-pant-delhi-capitals-vs-sanju-samson-r


ನವದೆಹಲಿ, 7 ಮೇ (ಹಿ.ಸ):ಆ್ಯಂಕರ್:ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಬಹುತೇಕ ಎಲ್ಲ ಪಂದ್ಯಗಳು ಹೈ-ಸ್ಕೋರ್ ಮ್ಯಾಚ್ ಆಗುತ್ತಿದ್ದು, ಅಭಿಮಾನಿಗಳಿಗಂತು ರಸದೌತಣ ನೀಡುತ್ತಿದೆ. ಇಂದು ಐಪಿಎಲ್ 2024 ರಲ್ಲಿ ಮತ್ತೊಂದು ಮಹತ್ವದ ಪಂದ್ಯ ನಡೆಯಲಿದೆ. ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಋತುವಿನ 9ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿತ್ತು. ಆಗ ರಾಜಸ್ಥಾನ್ 12 ರನ್ ಗಳ ಜಯ ಸಾಧಿಸಿತ್ತು. ಹೀಗಾಗಿ ಪಂತ್ ಪಡೆಗೆ ಇದೊಂದು ಸೇಡಿನ ಪಂದ್ಯ ಕೂಡ ಹೌದು.

ಈ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಡೆಯಿಂದ ಅತ್ಯುತ್ತಮ ಪ್ರದರ್ಶನ ಬಂದಿಲ್ಲ. ಆಡಿರುವ 11 ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಮತ್ತು ಆರರಲ್ಲಿ ಸೋಲು ಕಂಡು ಒಟ್ಟು 10 ಪಡೆದು -0442 ರನ್ರೇಟ್ ಹೊಂದಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಳು ವಿಕೆಟ್ಗಳಿಂದ ಸೋತಿತ್ತು. ನಾಯಕ ಪಂತ್ ಫಾರ್ಮ್ನಲ್ಲಿದ್ದರೂ ಉಳಿದ ಆಟಗಾರರಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಡೇವಿಡ್ ವಾರ್ನರ್ ಈ ಸೀಸನ್ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಅಪಾಯಕಾರಿ ಆಟಗಾರರಿದ್ದರೂ ಬ್ಯಾಟಿಂಗ್- ಬೌಲಿಂಗ್ನಲ್ಲಿ ಸ್ಥಿರ ಪ್ರದರ್ಶನ ತೋರಲು ಡೆಲ್ಲಿ ವಿಫಲವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande