ಐಪಿಎಲ್ ಟಿ-೨೦,ಮುಂಬೈ ಇಂಡಿಯನ್ಸ್ - ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿ
ಮುಂಬೈ, 6 ಮೇ (ಹಿ.ಸ):ಆ್ಯಂಕರ್: ಐಪಿಎಲ್ ಟಿ-೨೦ ಕ್ರಿಕೆಟ್ ಟೂರ್ನಿಯಲ್ಲಿ ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಿ
 Highest Powerplay Score Record


ಮುಂಬೈ, 6 ಮೇ (ಹಿ.ಸ):ಆ್ಯಂಕರ್: ಐಪಿಎಲ್ ಟಿ-೨೦ ಕ್ರಿಕೆಟ್ ಟೂರ್ನಿಯಲ್ಲಿ ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡ, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ೯೮ ರನ್ಗಳ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕೊತ್ತಾ ತಂಡ ನಿಗದಿತ ೨೦ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೩೫ ರನ್ ಗಳಿಸಿತು. ಪ್ರತಿಯಾಗಿ ೨೩೬ ರನ್ಗಳ ಗುರಿ ಬೆನ್ನತ್ತಿದ ಲಖನೌ ೧೬.೧ ಓವರ್ಗಳಲ್ಲಿ ೧೩೭ ರನ್ಗಳಿಸಿ ಸರ್ವಪತನ ಕಂಡಿತು. ಇಂದು ಮುಂಬೈನ್ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ ೭.೩೦ಕ್ಕೆ ಆರಂಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande