ಇಂದು ಎರಡು ಐಪಿಎಲ್ ಪಂದ್ಯ,ಪಂಜಾಬ್ ಕಿಂಗ್ಸ್ -ಚೆನ್ನೈ ಸೂಪರ್ ಕಿಂಗ್ಸ್,ಲಖನೌ ಸೂಪರ್ ಜಯಂಟ್ಸ್ -ಕೋಲ್ಕೊತಾ ನೈಟ್ ರೈಡರ್ಸ್
ನವದೆಹಲಿ, 5 ಮೇ (ಹಿ.ಸ):ಆ್ಯಂಕರ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲ
2024-kannada-how-can-rcb-qualify-for-play


ನವದೆಹಲಿ, 5 ಮೇ (ಹಿ.ಸ):ಆ್ಯಂಕರ್:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೪ ವಿಕೆಟ್ ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ೪ನೇ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಒಟ್ಟು ೮ ಅಂಕಗಳೊಂದಿಗೆ ತನ್ನ ಪ್ಲೇಆಫ್ ಪ್ರವೇಶವನ್ನು ಜೀವಂತವಾಗಿಟ್ಟುಕೊಂಡಿದೆ. ೧೪೮ ರನ್ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ೧೩.೪ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೫೨ ರನ್ ಕಲೆಹಾಕಿತು. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ೨೭ ಎಸೆತಗಳಲ್ಲಿ ೪೨ ರನ್ ಮತ್ತು ಫಾಫ್ ಡು ಪ್ಲೆಸಿಸ್, ೨೩ ಎಸೆತಗಳಲ್ಲಿ ೬೪ ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡ ೧೯.೩ ಓವರ್ ಗಳಲ್ಲಿ ೧೪೭ ರನ್ ಗಳಿಗೆ ಆಲೌಟಾಯಿತು. ಗುಜರಾತ್ ಪರ ಶಾರುಖ್ ಖಾನ್, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ತಂಡಕ್ಕೆ ಅಲ್ಪ ಕೊಡುಗೆ ನೀಡಿದರು. ಬೆಂಗಳೂರು ತಂಡದ ಪರ ಸಿರಾಜ್ , ಯಶ್ ದಯಾಳ್ ಮತ್ತು ವೈಶಾಖ್ ತಲಾ ಎರಡು ವಿಕೆಟ್ ಪಡೆದರು.

ಇಂದು ಎರಡು ಐಪಿಎಲ್ ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ಮಧ್ಯಾಹ್ನ ೩.೩೦ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದರೆ, ಲಖನೌದಲ್ಲಿ ರಾತ್ರಿ ೭.೩೦ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಮತ್ತು ಕೋಲ್ಕೊತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande