ಐಫೋನ್ ಕೇಸಿಂಗ್ ತಯಾರಿಸಲು ಹೈಟೆಕ್ ಮೆಷಿನ್; ಟಾಟಾ ಹೆಜ್ಜೆ
ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್: ಐಫೋನ್ ತಯಾರಿಸುತ್ತಿರುವ ಮೊದಲ ಭಾರತೀಯ ಕಂಪನಿ ಎನಿಸಿರುವ ಟಾಟಾ ಎಲೆಕ್ಟ್ರಾ
ata Electronics Building Hi Precision Machines U


ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್: ಐಫೋನ್ ತಯಾರಿಸುತ್ತಿರುವ ಮೊದಲ ಭಾರತೀಯ ಕಂಪನಿ ಎನಿಸಿರುವ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಐಫೋನ್ ನ ಕೇಸಿಂಗ್ ತಯಾರಿಸಲು ಬಳಸಲಾಗುವ ಹೈಟೆಕ್ ಯಂತ್ರಗಳನ್ನು ತಯಾರಿಸಲು ಸಜ್ಜಾಗಿದೆ. ಇವು ಬಹಳ ಸಂಕೀರ್ಣ ಎನಿಸಿದ ಹೈ ಪ್ರಿಸಿಶನ್ ಯಂತ್ರಗಳಾಗಿದ್ದು ಭಾರತದಲ್ಲಿ ಈ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುವ ಕಂಪನಿಗಳ ಸಂಖ್ಯೆ ಬಹಳ ಕಡಿಮೆ. ಐಫೋನ್ ಕೇಸಿಂಗ್ ತಯಾರಿಕೆಯಲ್ಲಿ ತೊಡಗಿರುವ ಬಹುತೇಕ ಎಲ್ಲಾ ಕಂಪನಿಗಳು ಈ ಮೆಷೀನ್ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತವೆ. ಟಾಟಾ ಸಂಸ್ಥೆಯೇ ಖುದ್ದಾಗಿ ಈ ಯಂತ್ರಗಳನ್ನು ತಯಾರಿಸಲಿದೆ. ಇದರಿಂದ ಚೀನಾ ಅವಲಂಬನೆ ತಗ್ಗುತ್ತದೆ. ಇದರ ಜೊತೆಗೆ ಈ ಹೈ ಪ್ರಿಸಿಶನ್ ಮೆಷಿನ್ಗಳನ್ನು ಟಾಟಾ ತನ್ನ ಘಟಕಗಳಿಗೆ ಬಳಸಿಕೊಳ್ಳುವುದು ಮಾತ್ರವಲ್ಲ, ಬೇರೆ ಐಫೋನ್ ತಯಾರಕ ಸಂಸ್ಥೆಗಳಿಗೆ ಸರಬರಾಜು ಮಾಡಬಹುದು.ಸಂಕೀರ್ಣವಾದ ಈ ಹೈಟೆಕ್ ಮೆಷೀನ್ಗಳ ಅಭಿವೃದ್ಧಿಗೆ ಟಾಟಾ ಎರಡು ಭಾರತೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ಮತ್ತು ಪುಣೆ ಮೂಲದ ಈ ಎರಡು ಕಂಪನಿಗಳು ಈ ಪ್ರಿಸಿಶನ್ ಮೆಷಿನ್ಗಳನ್ನು ತಯಾರಿಸಿಕೊಟ್ಟಿವೆ. ಬೆಂಗಳೂರು ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿರುವ ತನ್ನ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈ ಮೆಷೀನ್ಗಳನ್ನು ಹಂತ ಹಂತವಾಗಿ ಪರೀಕ್ಷಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande