ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಆಘಾತಕಾರಿ ಸುದ್ದಿ
ನವದೆಹಲಿ, 8 ಮೇ (ಹಿ.ಸ):ಆ್ಯಂಕರ್:ಇತ್ತೀಚಿನ ದಿನಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಉಪಯೋಗಿಸುವುದು ಸಾಮಾನ್ಯವಾ
ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಆಘಾತಕಾರಿ ಸುದ್ದಿ


ನವದೆಹಲಿ, 8 ಮೇ (ಹಿ.ಸ):ಆ್ಯಂಕರ್:ಇತ್ತೀಚಿನ ದಿನಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಉಪಯೋಗಿಸುವುದು ಸಾಮಾನ್ಯವಾಗಿದೆ. ಪ್ರತಿ ಫೋನ್ ಎರಡು ಸ್ಲಿಮ್ ಸ್ಲಾಟ್ಗಳೊಂದಿಗೆ ಬರುತ್ತದೆ. ಹಾಗಾಗಿ ಎಲ್ಲರೂ ಎರಡು ಸಿಮ್ ಕಾರ್ಡ್ ಬಳಸುತ್ತಿದ್ದಾರೆ. ಒಂದು ಪರ್ಸನಲ್ ನಂಬರ್ ಆಗಿದ್ದರೆ ಮತ್ತೊಂದು ಆಫೀಸ್ ನಂಬರ್ ಇರುತ್ತದೆ. ಎಲ್ಲರೂ ಇದಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ, ಇದೀಗ ಎರಡು ಸಿಮ್ ಹೊಂದಿರುವವರಿಗೆ ಆಘಾತಕಾರಿ ಸುದ್ದಿ ಇದೆ. ಕೆಲವೇ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಸುಂಕದ ಯೋಜನೆಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಅಂದರೆ, ಸಿಮ್ ಕಾರ್ಡ್ನ ರಿಚಾರ್ಜ್ಗಳ ಬೆಲೆ ಹೆಚ್ಚಳವಾಗಲಿದೆ.

ಟೆಲಿಕಾಂ ಕಂಪನಿಗಳು ಸುಂಕದ ಯೋಜನೆಯ ಬೆಲೆಯನ್ನು ಕೊನೆಯದಾಗಿ ಡಿಸೆಂಬರ್ 2021 ರಲ್ಲಿ ಹೆಚ್ಚಿಸಿತ್ತು. ಈಗ ಎರಡೂವರೆ ವರ್ಷಗಳ ನಂತರ, ಟೆಲಿಕಾಂ ತಮ್ಮ ಬೆಲೆಗಳನ್ನು ಪರಿಷ್ಕರಿಸಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಇಲ್ಲಿಯವರೆಗೆ, ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಟೆಲಿಕಾಂ ಸಂಸ್ಥೆ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸಬಹುದು ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

ಎರಡನೇ ಸಿಮ್ ಅನ್ನು ಸಕ್ರಿಯವಾಗಿಡಲು ಬಳಕೆದಾರ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗಬಹುದು. ಪ್ರಸ್ತುತ, ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಅನ್ನು ಸಕ್ರಿಯವಾಗಿಡಲು, ಕನಿಷ್ಠ 150 ರೂ. ಗಳ ರೀಚಾರ್ಜ್ ಮಾಡಬೇಕಾಗಿದೆ. ಆದರೆ ಸುಂಕ ಹೆಚ್ಚಳದ ನಂತರ ಸಿಮ್ ಅನ್ನು ಆಕ್ಟಿವೇಟ್ ಮಾಡಲು 150 ರೂಪಾಯಿ ಬದಲು 180 ರಿಂದ 200 ರೂಪಾಯಿ ನೀಡಬೇಕಾಗಬಹುದು. ಇದರರ್ಥ ನೀವು ಎರಡು ಸಿಮ್ಗಳನ್ನು ಆನ್ನಲ್ಲಿ ಇರಿಸಲು ಬಯಸಿದರೆ, ನೀವು ಮಾಸಿಕ ಕನಿಷ್ಠ 400 ರೂಪಾಯಿಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್


 rajesh pande