ಜಲಮಂಡಳಿ ಕರೆಗೆ ಉತ್ತಮ ಪ್ರತಿಕ್ರಿಯೆ, ಗ್ರೀನ್ ಸ್ಟಾರ್ ರೇಟಿಂಗ್ ಗೆ 629 ಕಟ್ಟಡಗಳಿಂದ ನೋಂದಣಿ
ಬೆಂಗಳೂರು, 5 ಮೇ (ಹಿ.ಸ):ಆ್ಯಂಕರ್:ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಜ
/good-response-to-bwssbs-green-star-challeng


ಬೆಂಗಳೂರು, 5 ಮೇ (ಹಿ.ಸ):ಆ್ಯಂಕರ್:ನೀರು ಉಳಿತಾಯದ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಜಲಮಂಡಳಿಯ ಪಂಚಸೂತ್ರಗಳ ಅಳವಡಿಕೆಯ 'ಗ್ರೀನ್ ಸ್ಟಾರ್ ಚಾಲೆಂಜ್'ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎರಡು ವಾರಗಳಲ್ಲಿ ಗ್ರೀನ್ ಸ್ಟಾರ್ ರೇಟಿಂಗ್ ಪಡೆಯಲು 629ಕ್ಕೂ ಹೆಚ್ಚು ಕಟ್ಟಡಗಳು ಹಾಗೂ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ.

ನೀರು ಉಳಿಸಿ-ಬೆಂಗಳೂರು ಬೆಳೆಸಿ ಕಾರ್ಯಕ್ರಮದ ಪ್ರಮುಖ ಭಾಗವಾದ ಗ್ರೀನ್ ಸ್ಟಾರ್ ಚಾಲೆಂಜ್ನ ಪಂಚಸೂತ್ರಗಳನ್ನು ಅಳವಡಿಸಿಕೊಂಡು ನೀರು ಉಳಿತಾಯದ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎರಡು ವಾರಗಳ ಹಿಂದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕರೆ ನೀಡಿತ್ತು. ಇದಕ್ಕೆ ಬೆಂಗಳೂರು ಆಪಾರ್ಟ್ಮೆಂಟ್ ಫೆಡರೇಷನ್, ಎಫ್ಕೆಸಿಸಿಐ, ಪೀಣ್ಯ ಕೈಗಾರಿಕಾ ಸಂಘ, ಕ್ರೆಡೈ ಬೆಂಗಳೂರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.

ಏನಿದು ಗ್ರೀನ್ ಸ್ಟಾರ್ ಚಾಲೆಂಜ್?

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗ್ ಅನ್ನು ನೀಡುವ ಬೆಂಗಳೂರು ಜಲಮಂಡಳಿಯ ಅಭಿಯಾನ ಇದಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಗ್ರೀನ್ ಸ್ಟಾರ್ ವೆಬ್ ಪೋರ್ಟಲ್:

ಏಪ್ರಿಲ್ 17ರಂದು ಎಫ್ಕೆಸಿಸಿಐ, ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್, ಕ್ರೆಡೈ, ಹೊಟೇಲ್ ಅಸೋಸಿಯೇಷನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆಗೂಡಿ ಜಲಮಂಡಳಿಯ ಮಹತ್ವಾಕಾಂಕ್ಷೆಯ ಗ್ರೀನ್ ಸ್ಟಾರ್ ಚಾಲೆಂಜ್ನ ನೋಂದಣಿಗಾಗಿ ರಚಿಸಿರುವ ವೆಬ್ ಪೋರ್ಟಲ್ಗೆ ಚಾಲನೆ ನೀಡಲಾಗಿತ್ತು.

ಯಾರಿಂದ ನೋಂದಣಿ? ಈ ವೆಬ್ಸೈಟ್ ಮೂಲಕ ಇದುವರೆಗೂ 416ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳು, 68ಕ್ಕೂ ಹೆಚ್ಚು ಸರಕಾರಿ ಸಂಸ್ಥೆಗಳು, 2 ಐಟಿ ಪಾರ್ಕ್ಗಳು, 13 ಐಟಿ ಕಂಪನಿಗಳು, 52 ವಾಣಿಜ್ಯ ಸಂಸ್ಥೆಗಳು, 32 ಹೋಟೆಲ್ಗಳು, 16 ಆಸ್ಪತ್ರೆಗಳು, 11 ಶೈಕ್ಷಣಿಕ ಸಂಸ್ಥೆಗಳು, 1 ಧೋಬಿ ಘಾಟ್ ಸೇರಿದಂತೆ 629 ಕಟ್ಟಡಗಳು ಹಾಗೂ ಪ್ರದೇಶಗಳು ಗ್ರೀನ್ ಸ್ಟಾರ್ ರೇಟಿಂಗ್ ಪಡೆಯಲು ನೋಂದಣಿಯಾಗಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande