ಕೇರಳದ ವಿಳಿಂಜಮ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್
ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್:ಕೇರಳದ ತಿರುವನಂತಪುರಂನಲ್ಲಿರುವ ವಿಳಿಂಜಮ್ ಬಂದರನ್ನು ಟ್ರಾನ್ಸ್ಶಿಪ್ಮೆಂಟ್
ನವುೀಾಾೀದೆಹಲಿ, 27 ಏಪ್ರಿಲ್   (ಹಿ.ಸ):ಆ್ಯಂಕರ್: 


ನವದೆಹಲಿ, 27 ಏಪ್ರಿಲ್ (ಹಿ.ಸ):ಆ್ಯಂಕರ್:ಕೇರಳದ ತಿರುವನಂತಪುರಂನಲ್ಲಿರುವ ವಿಳಿಂಜಮ್ ಬಂದರನ್ನು ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿ ಕಾರ್ಯಾಚರಿಸಲು ಬಂದರು ಸಚಿವಾಲಯ ಒಪ್ಪಿಗೆ ನೀಡಿದೆ. ಅದಾನಿ ಗ್ರೂಪ್ ಈ ಪೋರ್ಟ್ ಅನ್ನು ನಿರ್ಮಿಸಿದೆ. ಪೋರ್ಟ್ನ ವ್ಯವಹಾರಗಳನ್ನೂ ಅದಾನಿ ಕಂಪನಿ ನಿರ್ವಹಿಸಲಿದೆ. ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ ಆಗಿ ನಿರ್ವಹಿಸಲು ಸಚಿವಾಲಯದ ಒಪ್ಪಿಗೆ ಸಿಕ್ಕಿರುವುದರಿಂದ ಈಗ ಸುಂಕ ಇಲಾಖೆ ವಿಳಿಂಜಮ್ ಪೋರ್ಟ್ನಲ್ಲಿ ಕಚೇರಿ ಸ್ಥಾಪಿಸಲು ಅನುವು ಆಗುತ್ತದೆ. ಮುಂದಿನ ಮೂರು ತಿಂಗಳೊಳಗೆ ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅದಾನಿ ಗ್ರೂಪ್ಗೆ ಸೇರಿದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ 2015ರಲ್ಲಿ ವಿಳಿಂಜಮ್ನಲ್ಲಿ ಅಂತಾರಾಷ್ಟ್ರೀಯ ಟ್ರಾನ್ಸ್ಶಿಪ್ಮೆಂಟ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷ ವಿಳಂಬವಾಗಿ ಇದು ಕಾರ್ಯಾರಂಭಿಸಲು ಸಿದ್ಧವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande