ಪೇಟಿಎಂ ಷೇರುಬೆಲೆ ಮಹಾಕುಸಿತ; ಹೊಸ ದಾಖಲೆ
ನವದೆಹಲಿ, 9 ಮೇ (ಹಿ.ಸ):ಆ್ಯಂಕರ್: ಆರ್ ಬಿ ಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ನಿರ್ಬಂಧ ಬಿದ್ದಾಗ ಪೇಟಿಎ
 Paytm Share Price Hit New Bottom At Rs 317, K


ನವದೆಹಲಿ, 9 ಮೇ (ಹಿ.ಸ):ಆ್ಯಂಕರ್: ಆರ್ ಬಿ ಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ನಿರ್ಬಂಧ ಬಿದ್ದಾಗ ಪೇಟಿಎಂ ಅಥವಾ ಒನ್ 97 ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಕುಸಿತದ ಹೊಸ ಸುತ್ತು ಆರಂಭವಾಗಿತ್ತು. ಫೆಬ್ರುವರಿಯಿಂದ ಇಲ್ಲಿಯವರೆಗೆ ನಿರಂತರವಾಗಿ ಕುಸಿಯುತ್ತಿರುವ ಪೇಟಿಎಂ ಷೇರುಬೆಲೆ ಇಂದು ಮಾರುಕಟ್ಟೆ ದಿನಾಂತ್ಯದಲ್ಲಿ 317.15 ರೂ ತಲುಪಿದೆ. ಅದರ ಹಿಂದಿನ ಕನಿಷ್ಠ ದರ 318 ರೂ ಇತ್ತು. ಆ ದಾಖಲೆ ಮುರಿದು ಕುಸಿದಿದೆ. ಸತತ 10 ಮಾರುಕಟ್ಟೆ ದಿನಗಳು ಇದರ ಕುಸಿತವಾಗಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘಾವಧಿ ಕುಸಿತ ಕಂಡಿರುವುದು. 391.35 ರೂ ಇದ್ದ ಷೇರುಬೆಲೆ ಕೇವಲ 10 ಸೆಷನ್ನಲ್ಲಿ ಶೇ. 19ರಷ್ಟು ಕುಸಿತ ಕಂಡಿದೆ. ಈ ವರ್ಷದಲ್ಲಿ ಜನವರಿಯಿಂದ ಈಚೆ ಶೇ. 50ರಷ್ಟು ಬೆಲೆ ಕುಸಿತವಾಗಿದೆ.

ಪೇಟಿಎಂ ಷೇರು ಬೆಲೆ ಕುಸಿತ ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ. 280 ರೂವರೆಗೂ ಕುಸಿಯಬಹುದು ಎಂದು ಇವರು ನಿರೀಕ್ಷಿಸುತ್ತಿದ್ದಾರೆ. 2021ರಲ್ಲಿ ಪೇಟಿಎಂ ಐಪಿಒ ಬಿಡುಗಡೆ ಆದಾಗ ಭರ್ಜರಿ ಬೇಡಿಕೆ ಹೊಂದಿತ್ತು. ಒಂದು ಷೇರುಬೆಲೆ ಬರೋಬ್ಬರಿ 2,150ರೂ ಇತ್ತು. ಈಗ ಶೇ. 85.25ರಷ್ಟು ಕುಸಿತ ಕಂಡಿರುವುದು ನಿಜಕ್ಕೂ ಶೋಚನೀಯ ಪರಿಸ್ಥಿತಿ ಎನಿಸಿದೆ. ಪೇಟಿಎಂ ಲಾಭ ಗಳಿಸಲು ಪರದಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳು ಈ ಪರಿ ಷೇರು ಕುಸಿತಕ್ಕೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande