ಎಸ್ ಬಿ ಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ
ನವದೆಹಲಿ, 7 ಮೇ (ಹಿ.ಸ):ಆ್ಯಂಕರ್:ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸುಲಭ ದಾರಿ ಎಂದರೆ ಅದು ಮ್ಯೂಚುವಲ್
Rs 1 Lakh Becomes 84 Lakh In 25 Years


ನವದೆಹಲಿ, 7 ಮೇ (ಹಿ.ಸ):ಆ್ಯಂಕರ್:ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸುಲಭ ದಾರಿ ಎಂದರೆ ಅದು ಮ್ಯೂಚುವಲ್ ಫಂಡ್. ಈಗ ಬಹಳಷ್ಟು ಮ್ಯೂಚುವಲ್ ಫಂಡ್ ಗಳು ಅದ್ವಿತೀಯ ರಿಟರ್ನ್ ನೀಡಿವೆ. ಎಸ್ ಬಿ ಐನ ಕಾಂಟ್ರಾ ಫಂಡ್ ಕಳೆದ 25 ವರ್ಷದಲ್ಲಿ ಶೇ. 20ಕ್ಕೆ ಸಮೀಪದಷ್ಟು ವಾರ್ಷಿಕ ದರದಲ್ಲಿ ಲಾಭ ಮಾಡಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಂತೂ ಈ ಕಾಂಟ್ರಾ ಫಂಡ್ ಅಕ್ಷರಶಃ ಅಚ್ಚರಿಯ ಓಟ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಇದು ಶೇ. 47.76ರಷ್ಟು ರಿಟರ್ನ್ ತಂದಿದೆ. ಕಳೆದ 3 ವರ್ಷದಲ್ಲಿ ಶೇ. 29.72ರ ವಾರ್ಷಿಕ ದರದಲ್ಲಿ ಹೂಡಿಕೆ ಬೆಳೆದಿದೆ. ಐದು ವರ್ಷದಲ್ಲಿ ಶೇ. 24.69ರಷ್ಟು ಬೆಳೆದಿದೆ.

ಎಸ್ಬಿಐ ಕಾಂಟ್ರಾ ಫಂಡ್ ಆರಂಭವಾಗಿದ್ದು 1999ರಲ್ಲಿ. ಆಗ ಯಾರಾದರೂ ಈ ಫಂಡ್ನಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಆ ಹಣ 84.75 ಲಕ್ಷ ರೂ ಆಗಿರುತ್ತಿತ್ತು. ಒಂದು ವರ್ಷದ ಹಿಂದೆ ಒಂದು ಲಕ್ಷ ರೂ ಹಾಕಿದ್ದರೆ ಇವತ್ತು ಆ ಹಣ 1.47 ಲಕ್ಷ ರೂ ಆಗುತ್ತಿತ್ತು.

ಒಂದು ವೇಳೆ ಈ ಕಾಂಟ್ರಾ ಫಂಡ್ನಲ್ಲಿ ಎಸ್ಐಪಿ ಪ್ಲಾನ್ ಪ್ರಕಾರ ಪ್ರತೀ ತಿಂಗಳು ಕೇವಲ 5 ಸಾವಿರದಂತೆ 1999ರಿಂದಲೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಇವತ್ತು ಹಣ ಮೂರೂವರೆ ಕೋಟಿ ರೂಗೂ ಹೆಚ್ಚು ಆಗಿರುತ್ತಿತ್ತು.

ಹಿಂದೂಸ್ತಾನ್ ಸಮಾಚಾರ್


 rajesh pande