ಅಮೆರಿಕದಲ್ಲಿ ಲೇ ಆಫ್ ಮಾಡಿದರೂ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್
ನವದೆಹಲಿ, 5 ಮೇ (ಹಿ.ಸ):ಆ್ಯಂಕರ್:ಗೂಗಲ್ ಸಂಸ್ಥೆ ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಾ ಬಂದಿರುವ ಉದ್ಯೋಗ ಕ
ನವದೆನೇ್ಹಲಿ, 5 ಮೇ         (ಹಿ.ಸ):ಆ್ಯಂಕರ್:


ನವದೆಹಲಿ, 5 ಮೇ (ಹಿ.ಸ):ಆ್ಯಂಕರ್:ಗೂಗಲ್ ಸಂಸ್ಥೆ ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಾ ಬಂದಿರುವ ಉದ್ಯೋಗ ಕಡಿತ ಪ್ರಕ್ರಿಯೆ ಮುಂದುವರಿದಿದೆ. ಇತ್ತೀಚೆಗೆ ಗೂಗಲ್ ನ ಕೋರ್ ಟೀಮ್ ಅಥವಾ ಪ್ರಮುಖ ತಂತ್ರಜ್ಞರ ತಂಡಗಳಲ್ಲಿ ಸುಮಾರು 200 ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಇವರಲ್ಲಿ ಹೆಚ್ಚಿನವರು ಅಮೆರಿಕದ ಗೂಗಲ್ ಕಚೇರಿಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಪ್ರಧಾನ ಕಚೇರಿಯಲ್ಲಿನ ಎಂಜಿನಿಯರಿಂಗ್ ತಂಡದಿಂದಲೇ 50ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ವೇಳೆ ಬೇರೆ ದೇಶಗಳಲ್ಲಿ ಗೂಗಲ್ ನೇಮಕಾತಿ ಹೆಚ್ಚಿಸುತ್ತಿದೆ. ವರದಿಗಳ ಪ್ರಕಾರ ಮೆಕ್ಸಿಕೋ, ಭಾರತ, ಜರ್ಮನಿ ಮೊದಲಾದೆಡೆ ಗೂಗಲ್ನಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ.

ಈಗ ಲೇ ಆಫ್ ಆಗಿರುವ 200ಕ್ಕೂ ಹೆಚ್ಚು ಮಂದಿಯ ತಂಡ ನುರಿತ ತಂತ್ರಜ್ಞರಿಂದ ಕೂಡಿದ್ದಾಗಿದೆ. ಗೂಗಲ್ನ ಉತ್ಪನ್ನಗಳ ರೂವಾರಿಯೇ ಈ ತಂಡವಾಗಿತ್ತು. ಆದರೆ, ಅಧಿಕ ಸಂಬಳವಿದ್ದ ಕಾರಣ ವೆಚ್ಚ ಕಡಿತಕ್ಕೆ ಗೂಗಲ್ ಈ ಲೇ ಆಫ್ ಕ್ರಮ ಕೈಗೊಂಡಿದೆ. ಈ ವರ್ಷ ಈ ಪ್ರಮುಖ ತಂಡದಲ್ಲಿ ಆಗಿರುವ ಅತಿದೊಡ್ಡ ಲೇ ಆಫ್ ಇದಾಗಿದೆ ಎಂದು ಹೇಳಲಾಗಿದೆ. ಇದು ಉಳಿದ ಉದ್ಯೋಗಿಗಳನ್ನು ನಿರಾಳಗೊಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande