ಪ್ಯಾಲೇಸ್ತಾನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ
ವಾಷಿಂಗ್ಟನ್, 26 ಏಪ್ರಿಲ್ (ಹಿ.ಸ):ಆ್ಯಂಕರ್:ಪ್ಯಾಲೇಸ್ತಾನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಮೆರಿಕದ ಪ್ರತಿಷ್ಠಿತ ಪ
sted-for-taking-part-in-anti-israel-protests-in-us/


ವಾಷಿಂಗ್ಟನ್, 26 ಏಪ್ರಿಲ್ (ಹಿ.ಸ):ಆ್ಯಂಕರ್:ಪ್ಯಾಲೇಸ್ತಾನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಮೆರಿಕದ ಪ್ರತಿಷ್ಠಿತ ಪ್ರಿನ್್ಸಟನ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬರನ್ನು ಬಂಧಿಸಲಾಗಿದೆ. ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಶಿಬಿರಕ್ಕಾಗಿ ಪ್ರತಿಭಟನಾಕಾರರು ಟೆಂಟ್ಗಳನ್ನು ಸ್ಥಾಪಿಸಿದ ನಂತರ ತಮಿಳುನಾಡು ಮೂಲದ ಅಚಿಂತ್ಯ ಶಿವಲಿಂಗನ್ ಮತ್ತು ಹಸನ್ ಸೈಯದ್ ಅವರನ್ನು ಬಂಧಿಸಲಾಗಿದೆ.

ಇಬ್ಬರು ಪದವೀಧರ ವಿದ್ಯಾರ್ಥಿಗಳನ್ನು ಅತಿಕ್ರಮ ಪ್ರವೇಶಕ್ಕಾಗಿ ಬಂಧಿಸಲಾಗಿದೆ ಮತ್ತು ತಕ್ಷಣ ಕ್ಯಾಂಪಸ್ನಿಂದ ನಿರ್ಬಂಧಿಸಲಾಗಿದೆ ಎಂದು ವಿಶ್ವವಿದ್ಯಾಲಯದ ವಕ್ತಾರ ಜೆನ್ನಿಫರ್ ಮೊರಿಲ್ ಹೇಳಿದ್ದಾರೆ. ಕ್ಯಾಂಪಸ್ನಲ್ಲಿ ಟೆಂಟ್ಗಳನ್ನು ಸ್ಥಾಪಿಸುವುದು ವಿಶ್ವವಿದ್ಯಾಲಯದ ನೀತಿಯನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಚಟುವಟಿಕೆಯನ್ನು ನಿಲ್ಲಿಸಲು ಮತ್ತು ಪ್ರದೇಶವನ್ನು ತೊರೆಯುವಂತೆ ಸಾರ್ವಜನಿಕ ಸುರಕ್ಷತಾ ಇಲಾಖೆಯಿಂದ ಪುನರಾವರ್ತಿತ ಎಚ್ಚರಿಕೆಗಳನ್ನು ನೀಡಲಾಯಿತು ಮತ್ತು ಅವರು ಈಗ ಶಿಸ್ತು ಕ್ರಮವನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅವರ ಬಂಧನದ ನಂತರ, ಇತರ ಪ್ರತಿಭಟನಾಕಾರರು ತಮ ಕ್ಯಾಂಪಿಂಗ್ ಗೇರ್ಗಳನ್ನು ಸ್ವಯಂಪ್ರೇರಣೆಯಿಂದ ಪ್ಯಾಕ್ ಮಾಡಿ ಪ್ರದರ್ಶನವನ್ನು ಮುಂದುವರೆಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande