ಭಾರತದ ಪ್ರದೇಶಗಳನ್ನು ತನ್ನ ನೋಟಿನಲ್ಲಿ ಮುದ್ರಿಸಲು ನೇಪಾಳ ನಿರ್ಧಾರ
ಕಠ್ಮಂಡು , 5 ಮೇ (ಹಿ.ಸ):ಆ್ಯಂಕರ್:ನೇಪಾಳ ತನ್ನ ಹೊಸ 100 ರೂ. ನೋಟುಗಳ ಮೇಲೆ ಭಾರತದ 3 ಗಡಿ ಪ್ರದೇಶಗಳಾದ ಲಿಪ
ನ್್ನ್


ಕಠ್ಮಂಡು , 5 ಮೇ (ಹಿ.ಸ):ಆ್ಯಂಕರ್:ನೇಪಾಳ ತನ್ನ ಹೊಸ 100 ರೂ. ನೋಟುಗಳ ಮೇಲೆ ಭಾರತದ 3 ಗಡಿ ಪ್ರದೇಶಗಳಾದ ಲಿಪುರೇಖ್ , ಲಿಂಪಿಯಾಧುರಾ , ಕಾಲಾಪಾನಿಯನ್ನು ತೋರಿಸುವ ನಕ್ಷೆಯನ್ನು ಮುದ್ರಣ ಮಾಡಲು ನಿರ್ಧಾರ ಮಾಡಿದೆ. ಭಾರತವು ಆ ಎಲ್ಲಾ 3 ಪ್ರದೇಶಗಳು ತನಗೆ ಸೇರಿದ್ದು ಎಂದು ಈ ಹಿಂದೆಯೂ ಸಮರ್ಥಿಸಿಕೊಂಡಿತ್ತು. ಇಷ್ಟಾದರೂ ಮತ್ತೆ ನೇಪಾಳ ಬಾಲ ಬಿಚ್ಚಿದೆ.

ಭಾರತದೊಂದಿಗಿನ ವಿವಾದದ ನಡುವೆ ನೇಪಾಳವು ತನ್ನ ಭೂಪ್ರದೇಶದ ಭಾಗವಾಗಿ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ಚಿತ್ರಿಸುವ ನಕ್ಷೆಯೊಂದಿಗೆ ದೇಶದಲ್ಲಿ ಹೊಸ 100 ರೂಪಾಯಿ ಕರೆನ್ಸಿ ನೋಟನ್ನು ಮುದ್ರಿಸಲು ನಿರ್ಧರಿಸಿದೆ. ಈ ಮೊದಲು 2020ರ ಜೂನ್ 18ರಂದು ನೇಪಾಳ ತನ್ನ ಸಂವಿಧಾನವನ್ನು ಬದಲಾಯಿಸುವ ಮೂಲಕ 3 ವಿವಾದಿತ ಪ್ರದೇಶಗಳನ್ನು ಸೇರಿಸುವ ಮೂಲಕ ದೇಶದ ರಾಜಕೀಯ ನಕ್ಷೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತ ಆ ಮೂರು ವಿವಾದಿತ ಪ್ರದೇಶಗಳು ನಮ್ಮ ದೇಶಕ್ಕೆ ಸೇರಿದ್ದು ಎಂದು ಹೇಳಿತ್ತು.

ಹೊಸ ಕರೆನ್ಸಿ ನೋಟು ಮುದ್ರಣದ ನಿರ್ಧಾರವನ್ನು ಪ್ರಕಟಿಸಿದ ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವೆ ರೇಖಾ ಶರ್ಮ, ಪ್ರಧಾನಿ ಪುಷ್ಪಕಮಲ್ ದಹಾಲ್ ಅಧ್ಯಕ್ಷತೆಯ ಮಂತ್ರಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande