ಪಂಚಾಯತ್ ರಾಜ್ ವ್ಯವಸ್ಥೆ ಲಿಂಗ ಸಮಾನತೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ : ರುಚಿರಾ ಕಾಂಬೋಜ್
ನ್ಯೂ ಯಾರ್ಕ್, 4 ಮೇ (ಹಿ.ಸ):ಆ್ಯಂಕರ್ :ಭಾರತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವದಲ್ಲಿ ಮಾಡಿರ
ಪಂಚಾಯತ್ ರಾಜ್ ವ್ಯವಸ್ಥೆ ಲಿಂಗ ಸಮಾನತೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ : ರುಚಿರಾ ಕಾಂಬೋಜ್


ನ್ಯೂ ಯಾರ್ಕ್, 4 ಮೇ (ಹಿ.ಸ):ಆ್ಯಂಕರ್ :ಭಾರತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವದಲ್ಲಿ ಮಾಡಿರುವ ಗಮನಾರ್ಹ ಪ್ರಗತಿಯ ಬಗ್ಗೆ ಬೆಳಕು ಚೆಲ್ಲಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, ಭಾರತವು ಪಂಚಾಯತ್ ರಾಜ್ ಎಂದು ಕರೆಯಲ್ಪಡುವ ಗ್ರಾಮೀಣ ಆಡಳಿತದ ವಿಶಿಷ್ಟ ವ್ಯವಸ್ಥೆಯ ಬಗ್ಗೆ ಹೆಮ್ಮೆಪಡುತ್ತದೆ ಎಂದಿದ್ದಾರೆ.

ಭಾರತದ ಸಿಪಿಡಿ57 ಸೈಡ್ ಈವೆಂಟ್ನಲ್ಲಿ ಮಾತನಾಡಿದ ಅವರು, ಪಂಚಾಯತಿ ರಾಜ್ ಗ್ರಾಮ ಸಭೆಯ ಮೂಲಕ ಪಂಚಾಯತ್ನ ಎಲ್ಲಾ ನಿವಾಸಿಗಳಿಂದ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುವ ನೇರ ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande