ಎವಿಇಎಸ್ ಮತದಾರರಿಗೆ ಅಂಚೆ ಮತದಾನ ಕೇಂದ್ರದ ವ್ಯವಸ್ಥೆ: ಜಿಲ್ಲಾಧಿಕಾರಿ
ರಾಯಚೂರು,, 26 ಏಪ್ರಿಲ್ (ಹಿ.ಸ): ಆ್ಯಂಕರ್: ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಲೋಕಸಭಾ ಕ್ಷೇತ್ರದ ಹೊರಗ
ಎವಿಇಎಸ್ ಮತದಾರರಿಗೆ ಅಂಚೆ ಮತದಾನ ಕೇಂದ್ರದ ವ್ಯವಸ್ಥೆ: ಜಿಲ್ಲಾಧಿಕಾರಿ


ರಾಯಚೂರು,, 26 ಏಪ್ರಿಲ್ (ಹಿ.ಸ):

ಆ್ಯಂಕರ್: ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಲೋಕಸಭಾ ಕ್ಷೇತ್ರದ ಹೊರಗೆ ಅಥವಾ ಜಿಲ್ಲೆಯ ಹೊರಗೆ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಮತದಾನದ ದಿನಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದೇ ಇರುವ AVES (Abscentee Voters Essential service) ಅಧಿಕಾರಿ ಮತ್ತು ಸಿಬ್ಬಂದಿಗಳ ಮತದಾನಕ್ಕಾಗಿ ಪೆÇೀಸ್ಟಲ್ವೋಟಿಂಗ್ ಸೆಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಎಲ್.ಚಂದ್ರಶೇಖರನಾಯಕ್ ಅವರು ತಿಳಿಸಿದ್ದಾರೆ.

ತಹಶೀಲ್ ಕಾರ್ಯಾಲಯ ರಾಯಚೂರಿನಲ್ಲಿ ಕೇಂದ್ರ ತೆರೆಯಲಾಗಿದ್ದು, ಮೇ 1ರಿಂದ 3ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ಗಂಟೆವರೆಗೆ ಮತದಾನಮಾಡಬಹುದಾಗಿದೆ.

ನಿಗದಿತ ಕೇಂದ್ರದಲ್ಲಿ ಮಾತ್ರ ಎವಿಇಎಸ್ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇರುವುದಿಲ್ಲ. ಎವಿಇಎಸ್ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರುಕೋರಿದ್ದಾರೆ.


 rajesh pande