ರಾಯಚೂರು ವಿವಿ : ಆಂಗ್ಲ ಭಾಷಾ ದಿನ
ರಾಯಚೂರು, 26 ಏಪ್ರಿಲ್ (ಹಿ.ಸ): ಆ್ಯಂಕರ್:ಇಂಗ್ಲಿಷ್ ಭಾಷೆಯು ಅತಿ ಹೆಚ್ಚು ಜನರು ಮಾತನಾಡುವ ವಿಶ್ವದ ವ್ಯವಹಾರಿಕ ಹಾಗೂ
   ರಾಯಚೂರು ವಿವಿ : ಅಂತರರಾಷ್ಟ್ರೀಯ ಆಂಗ್ಲ ಭಾಷಾ ದಿನ


   ರಾಯಚೂರು ವಿವಿ : ಅಂತರರಾಷ್ಟ್ರೀಯ ಆಂಗ್ಲ ಭಾಷಾ ದಿನ


   ರಾಯಚೂರು ವಿವಿ : ಅಂತರರಾಷ್ಟ್ರೀಯ ಆಂಗ್ಲ ಭಾಷಾ ದಿನ


ರಾಯಚೂರು, 26 ಏಪ್ರಿಲ್ (ಹಿ.ಸ):

ಆ್ಯಂಕರ್:ಇಂಗ್ಲಿಷ್ ಭಾಷೆಯು ಅತಿ ಹೆಚ್ಚು ಜನರು ಮಾತನಾಡುವ ವಿಶ್ವದ ವ್ಯವಹಾರಿಕ ಹಾಗೂ ಸಂವಹನ ಭಾಷೆಯಾಗಿದೆ ಈ ಭಾಷೆಯು ತುಂಬಾ ಸುಂದರವಾಗಿದ್ದು ಕಲಿಯುವುದು ತುಂಬಾ ಸುಲಭ ಆದರೆ ಪ್ರಾಮಾಣಿಕವಾಗಿ ಇದನ್ನು ಅರಿತುಕೊಂಡು ಕಲಿಯದೆ ಇರುವುದರಿಂದ ಕ್ಲಿಷ್ಟವಾಗಿ ಕಾಣುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಹನುಮಂತು ಹೇಳಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಏರ್ಪಡಿಸಿದ್ದ ವಿಲಿಯಂ ಷೆಕ್ಸ್ಪಿಯರ್ ಅವರ ಜನನ ಹಾಗೂ ಮರಣ ದಿನಗಳು ಒಂದೇ ಆಗಿರುವುದರಿಂದ ಸ್ಮರಣಾರ್ಥವಾಗಿ ಇಂದು ಇಂಗ್ಲಿಷ್ ಭಾಷಾ ದಿನ ಹಾಗೂ ವಿಶ್ವ ಪುಸ್ತಕ ದಿನ ಎಂದು 23 ಎಪ್ರೀಲ್ ರಂದು ಆಚರಿಸಲಾಗುತ್ತದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಸಂವಹನ ಕೌಶಲ್ಯ ಮತ್ತು ವಿಷಯದಲ್ಲಿ ಪರಿಣಿತರಾಗಿರಬೇಕು. ಓದುವ ಬರೆಯುವ ಕೌಶಲ್ಯ ವಿದ್ಯಾರ್ಥಿಗಳು ಬೆಳೆಸೆಕೊಳ್ಳಬೇಕು ಎಂದರು.

ಇಂಗ್ಲಿಷ್ ಭಾಷೆಗೆ ಅವಕಾಶಗಳು ಸಾಕಷ್ಟಿವೆ ಆದರೆ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಜನೆ ವೇಳೆ ಪಾಂಡಿತ್ಯಕ್ಕೆ ಬದಲಾಗಿ ಕೇವಲ ಪದವಿಗಾಗಿ ಬೆನ್ನತ್ತುತ್ತಿರುವುದರಿಂದ ಕಲಿಕೆಗೆ ಪ್ರಾಮುಖ್ಯತೆ ನೀಡದೆ ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಕಷ್ಟ ಎಂದು ಅಲಕ್ಷಿಸಲಾಗಿದೆ ಹೆಚ್ಚು ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವುದರಿಂದ ಪರಿಚಿತ ಅಪರಿಚಿತರೊಂದಿಗೆ ನಿರಂತರವಾಗಿ ತಪ್ಪನ್ನು ತಿದ್ದಿಕೊಳ್ಳುತ್ತಾ ಇಂಗ್ಲಿಷ್ ಮಾತನಾಡುವುದರಿಂದ ಭಾಷೆ ಕಲಿಯುವುದು ಸುಲಭ ಇದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಾದರು ಕ್ಷೇತ್ರದಲ್ಲಾದರು ಸ್ಥಾನದಲ್ಲಾದರೂ ಬದುಕು ಸರಳ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚುರು ವಿಶ್ವವಿದ್ಯಾಲಯದ ಕಲಾ ಮತ್ತು ವಾಣಿಜ್ಯ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್ ಮಾತನಾಡಿದ ಅವರು, ವಿಲಿಯಂ ಷೆಕ್ಸ್ಪಿಯರ್ ಅವರನ್ನು ಇಂದಿನ ದಿನ ಸ್ಮರಿಸಬೇಕು ಇಂಗ್ಲೀಷ್ ಸಾಹಿತ್ಯದಲ್ಲಿ ಇವರ ಕೊಡುಗೆ ಅಪಾರವಾದುದು ಹಾಗಾಗಿ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಸಂವಹನದ ಪ್ರಮುಖ ಸಾಧನವೇ ಆಂಗ್ಲ ಭಾಷೆ. ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸಬೇಕಾದರೆ ಅವರಿಗೆ ಶಿಕ್ಷಕರಿಂದ ಮಾರ್ಗದರ್ಶನ ಆರಂಭದಿಂದಲೇ ಸಿಗಬೇಕು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೆಗ್ಗೂಡಿನ ಪ್ರಮುಖ ರಂಗಭೂಮಿ ಶಿಕ್ಷಣ ಸಂಸ್ಥೆಯಾದ ನಿನಾಸಂನಲ್ಲಿನ ಉತ್ತಮ ತರಬೇತಿ ಪಡೆದ ರಂಗಭೂಮಿ ನಿರ್ದೇಶಕ ಹಾಗೂ ನಟ ರಂಜಾನ್ ಸಾಬ್ ಉಳ್ಳಾಗಡ್ಡಿ ಮಾತನಾಡಿ, ಇಂಗ್ಲಿಷ್ ಸಾಹಿತ್ಯದಲ್ಲಿ ತನ್ನ ಪ್ರಮುಖ ನಾಟಕಗಳ ಮೂಲಕ 16 ನೇ ಶತಮಾನದಿಂದಲೂ ಪ್ರಸ್ತುತ ಕಾಲಮಾನದವರೆಗೂ ಜನರ ಮನಸ್ಸಿನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಯಲ್ಲಿ ಮನೆ ಮಾಡಿದ ನಾಟಕಕಾರ ವಿಲಿಯಂ ಷೆಕ್ಸ್ಪಿಯರ್ ರವರ ಕೊಡುಗೆ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಅಪಾರವಾಗಿದ್ದು, ಸಾಕಷ್ಟು ಕಥೆ ಚಿತ್ರಕಥೆಗಳಿಗೆ ಸ್ಫೂರ್ತಿದಾಯಕಗಳಾಗಿವೆ ಎಂದು ಹೇಳುತ್ತಾ ಅವ್ವ ಎಂಬ ಸ್ವರಚಿತ ಕಥೆಯ ಏಕಪಾತ್ರಾಬಿನಯ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು.

ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕ ಡಾ.ಶರಣಬಸವರಾಜ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಭಾಷೆ ಕಲಿಯಬೇಕಾದ ಅವಶ್ಯಕತೆಯಿದೆ ತಂತ್ರಜ್ಞಾನದಿಂದ ಓಡುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಗತ್ತಿನ ಸಂಸ್ಕøತಿ ಹಾಗೂ ಪರಂಪರೆಯನ್ನು ಅರಿಯಬೇಕಾದರೆ ನಮ್ಮ ಆಲೋಚನೆಗಳು ಪ್ರಪಂಚಕ್ಕೆ ನೀಡಬೇಕಾದರೆ ಈ ಭಾಷೆ ಕಲಿಕೆ ಅಗತ್ಯ ಇದೊಂದು ವಿಮೋಚನಾ ಶಕ್ತಿ ಎಂದು ಹೇಳುತ್ತಾ ಯುಸಿಂಗ್ ಟೆಕ್ನಾಲಜಿ ಫಾರ್ ಮಲ್ಟಿಲಿಂಗ್ವಲ್ ಲರ್ನಿಂಗ್ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಸಂಯೋಜಕ ಅನಿಲ್ ಅಪ್ರಾಳ್ ಉಪನ್ಯಾಸಕರಾದ ಡಾ.ಆನಂದ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಹಾಗೂ ಪ್ರಸಾರಾಂಗದ ಸಂಯೋಜಕ ಡಾ.ಶರಣಪ್ಪ ಚಲುವಾದಿ ಅತಿಥಿ ಪರಿಚಯ ಮಾಡಿದರು. ನೀಲಮ್ಮ ಪ್ರಾರ್ಥಿಸಿದರು. ರಮೇಶ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಶರೀಫ್, ಶಂಕ್ರವ್ವ ನಿರೂಪಿಸಿದರು, ರಾಜಶ್ರೀ ವಂದಿಸಿದರು, ಇಂಗ್ಲಿಷ್ ವಿದ್ಯಾರ್ಥಿಗಳಾದ ಸಹನಾ, ಮಹೇಶ್, ಆ್ಯನಿ ಗ್ರೇಸಿ, ರಾಜು, ಉಪನ್ಯಾಸಕರಾದ ಇತಿಹಾಸ ವಿಭಾಗದ ಡಾ.ಪದ್ಮಜಾ ದೇಸಾಯಿ, ಸ್ವಾಮ್ಯ, ಪತ್ರಿಕೋದ್ಯಮ ವಿಭಾಗದ ವಿಜಯ ಕುಮಾರ, ಸಮಾಜಶಾಸ್ತ್ರ ಉಪನ್ಯಾಸಕಿ ಡಾ.ಮೇಘನಾ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


 rajesh pande