ಬಳ್ಳಾರಿಯನ್ನು ವಿಶ್ವದ ಜೀನ್ಸ್ ರಾಜಧಾನಿಯನ್ನಾಗಿ ಮಾಡುವೆ -ರಾಹುಲ್ ಗಾಂಧಿ
ಬಳ್ಳಾರಿ, 26 ಏಪ್ರಿಲ್ (ಹಿ.ಸ): ಆ್ಯಂಕರ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ಭಾರತೀಯ ಜನತಾ ಪಾರ್ಟಿ ಅಲ್ಲ, `ಭ
 ರಾಹುಲ್ ಗಾಂಧಿ


ಬಳ್ಳಾರಿ, 26 ಏಪ್ರಿಲ್ (ಹಿ.ಸ):

ಆ್ಯಂಕರ್ :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ಭಾರತೀಯ ಜನತಾ ಪಾರ್ಟಿ ಅಲ್ಲ, `ಭಾರತೀಯ ಚೊಂಬು ಪಾರ್ಟಿ' ಎಂದು ಜನರಿಗೆ ಖಾಲಿ ಸ್ಟೀಲ್ ಚೊಂಬು ತೋರಿಸುವ ಮೂಲಕ ಬಿಜೆಪಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಬಳ್ಳಾರಿಯಲ್ಲಿ ಶುಕ್ರವಾರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ಗಾಂಧಿ, 25 ನಿಮಿಷಗಳ ಭಾಷದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ಸ್ಟೀಲ್ನ ಖಾಲಿ ಚೆಂಬನ್ನು ಪ್ರದರ್ಶನ ಮಾಡಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿ, ಮನೋರಂಜನೆ ನೀಡಿದ್ದು ವಿಶೇಷ.

ಕರ್ನಾಟಕ ರಾಜ್ಯ ಸರ್ಕಾರವು 18 ಸಾವಿರ ಕೋಟಿ ರೂಪಾಯಿ ಬರ ಪರಿಹಾರ ಕೇಳಿದಾಗಲೂ - ಕೇಂದ್ರ ಹಣಕಾಸು ಆಯೋಗವು 7000 ಕೋಟಿ ರೂಪಾಯಿ ಕೊಡಬೇಕಾಗಿದ್ದರೂ ಕರ್ನಾಟಕ್ಕೆ ಸಿಕ್ಕಿದ್ದು ಖಾಲಿ ಚೊಂಬು, ಖಾಲಿ ಚೊಂಬು ಎನ್ನುತ್ತಲೇ ಚೆಂಬನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಿದರು.

ಕರ್ನಾಟಕ ಸರ್ಕಾರವು ಐದು ಗ್ಯಾರಂಟಿಗಳ ಮೂಲಕ ದೇಶಕ್ಕೇ ಹೊಸ ದಿಕ್ಕನ್ನು ತೋರಿಸಿದೆ. ಕರ್ನಾಟಕ ಸರ್ಕಾರದ ಗೃಹಲಕ್ಷಿö್ಮ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಯೋಜನೆಗಳಿಂದ ಅನೇಕರು ಫಲಾನುಭವಿಗಳಾಗಿ ಸಂತೋಷವಾಗಿದ್ದಾರೆ.

ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಭೂಮಿಯ ಮೇಲಿರುವ ಯಾವ ಸರ್ಕಾರವೂ ನೀಡದಿರುವ `ಮಹಾಲಕ್ಷಿö್ಮ' ಯೋಜನೆಯನ್ನು ದೇಶದಲ್ಲಿ ಜಾರಿ ಮಾಡಿ, ಕೋಟ್ಯಾಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಿದೆ ಎಂದರು.

`ಮಹಾಲಕ್ಷಿö್ಮ' ಯೋಜನೆ ಅಡಿಯಲ್ಲಿ ದೇಶದಲ್ಲಿರುವ ಬಡ ಜನರ ಪಟ್ಟಿಯನ್ನು ಸಿದ್ದಪಡಿಸಿ ಕುಟುಂಬದಲ್ಲಿಯ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ, ಅಂದರೆ ಪ್ರತೀ ತಿಂಗಳು 8,500 ರೂಪಾಯಿ ಹಾಗೂ ಕರ್ನಾಟಕ ಸರ್ಕಾರದ 2000 ರೂಪಾಯಿ ಸೇರಿಸಿ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿ ಮಾಡುತ್ತೇವೆ. ಪ್ರತೀ ತಿಂಗಳು ನಿಗಧಿತ ದಿನಾಂಕದAದು ಫಲಾನುಭವಿಗಳ ಖಾತೆಗೆ ಹಣ ಫಟಾಪಟ್ ಎಂದು ಪಾವತಿ ಆಗಲಿದೆ ಎಂದರು.

'ಬಡವರಿಗೆ, ದುರ್ಬಲರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಸೇರಿದಂತೆ ಎಲ್ಲಾ ಸಮುದಾಯದವರಿಗೆ ಅಧಿಕಾರ ಮತ್ತು ಹಕ್ಕು ಕಲ್ಪಿಸಿರುವ ದೇಶದ ಸಂವಿಧಾನವನ್ನು ನಾಶ ಮಾಡಲು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಹುನ್ನಾರ ನಡೆಸಿದ್ದಾರೆ. ಆದರೆ, ಸಂವಿಧಾನವನ್ನು ನಾಶ ಮಾಡುವ ಶಕ್ತಿ ದೇಶದಲ್ಲಿಯೇ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ ಎಂದರು.

'ಮೋದಿಯವರು ದೇಶದ 220 ಕೋಟ್ಯಾಧೀಶರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾ ಮಾಡಿಲ್ಲ. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟವು ರೈತರ ಸಾಲ ಮನ್ನಾ ಮಾಡಿ ಕನಿಷ್ಠ ಬೆಂಬಲ ಬೆಲೆ ನೀಡಲಿದೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಪದವಿ ಮುಗಿದ ಯುವಶಕ್ತಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯ ಕೌಶಲ್ಯವನ್ನು ನೀಡಿ ಆರ್ಥಿಕ ನೆರವನ್ನು ಒದಗಿಸಿ, ಭವಿಷ್ಯ ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಲಿದೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲಾ, ಸಚಿವರಾದ ನಾಗೇಂದ್ರ, ಸಂತೋಷ ಲಾಡ್, ಜಮೀರ್ ಅಹಮದ್, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಇನ್ನಿತರರು ವೇದಿಕೆಯಲ್ಲಿದ್ದರು.

ಬಳ್ಳಾರಿಯನ್ನು ವಿಶ್ವದ ಜೀನ್ಸ್ ರಾಜಧಾನಿಯನ್ನಾಗಿ ಖಂಡಿತವಾಗಿ ಮಾಡುವೆ. ಈ ವಿಷಯವನ್ನು ಈ ಮೊದಲೇ ಹೇಳಿದ್ದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿದ್ದೂ ಅಲ್ಲದೇ, ಖಂಡಿತವಾಗಿಯೂ ಬಳ್ಳಾರಿಯನ್ನು ವಿಶ್ವದ ಜೀನ್ಸ್ ರಾಜಧಾನಿ ಮಾಡುವೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande