ಹಡಗಲಿಯಲ್ಲಿ ಶೇ.75.02, ಹಗರಿಬೊಮ್ಮನಹಳ್ಳಿಯಲ್ಲಿ ಶೇ.77.96,ವಿಜಯನಗರದಲ್ಲಿ ಶೇ.70.38, ಕೂಡ್ಲಿಗಿಯಲ್ಲಿ ಶೇ.76.63
ಹೊಸಪೇಟೆ, 9 ಮೇ (ಹಿ.ಸ): ಆ್ಯಂಕರ್: ಮೇ 7ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನದ ಅಂತಿಮವಾ
ಹಡಗಲಿಯಲ್ಲಿ ಶೇ.75.02, ಹಗರಿಬೊಮ್ಮನಹಳ್ಳಿಯಲ್ಲಿ ಶೇ.77.96,ವಿಜಯನಗರದಲ್ಲಿ ಶೇ.70.38, ಕೂಡ್ಲಿಗಿಯಲ್ಲಿ ಶೇ.76.63


ಹೊಸಪೇಟೆ, 9 ಮೇ (ಹಿ.ಸ):

ಆ್ಯಂಕರ್: ಮೇ 7ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತದಾನದ ಅಂತಿಮವಾದ ಶೇಕಡವಾರು ಪ್ರಮಾಣವು 09 ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗು ವಿಜಯನಗರ ಜಿಲ್ಲಾ ವ್ಯಾಪ್ತಿಯ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.02ರಷ್ಟು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.77.96ರಷ್ಟು, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.38ರಷ್ಟು ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.76.63ರಷ್ಟು ದಾಖಲಾಗಿದೆ ಎಂದು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.

ಮೇ 7ರಂದು ಬೆಳಗ್ಗೆ 7 ರಿಂದ ಆರಂಭವಾಗಿ ಮತದಾನದ ಅವಧಿ ಮುಕ್ತಾಯದವರೆಗೆ ಹಡಗಲಿ ಕ್ಷೇತ್ರದಲ್ಲಿ ಒಟ್ಟು 1,96,858 ಮತದಾರರ ಪೈಕಿ 1,47,689 ಜನರು ತಮ್ಮ ಮತಹಕ್ಕನ್ನು ಚಲಾಯಿಸಿ ಶೇ.75.02ರಷ್ಟು ಮತದಾನವಾಗಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು 2,37,811 ಮತದಾರರ ಪೈಕಿ 1,85,395 ಜನರು ಮತ ಚಲಾಯಿಸಿ ಶೇ.77.96ರಷ್ಟು ಮತದಾನವಾಗಿದೆ. ವಿಜಯನಗರ ಕ್ಷೇತ್ರದಲ್ಲಿ ಒಟ್ಟು 2,60,197 ಮತದಾರರ ಪೈಕಿ 1,83,130 ಜನರು ಮತ ಚಲಾಯಿಸಿ ಶೇ.70.38ರಷ್ಟು ಮತದಾನವಾಗಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,09,996 ಮತದಾರರ ಪೈಕಿ 1,60,923 ಜನರು ತಮ್ಮ ಮತಹಕ್ಕನ್ನು ಚಲಾಯಿಸಿದ್ದು ಶೇ.76.63ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


 rajesh pande