ಎಂಡಿಆರ್ಎಸ್ ವಸತಿ ವಿಜ್ಞಾನ ಕಾಲೇಜಿಗೆ ಅರ್ಜಿ ಆಹ್ವಾನ
ಕೊಪ್ಪಳ, 9 ಮೇ (ಹಿ.ಸ): ಆ್ಯಂಕರ್: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರೇ
ಎಂಡಿಆರ್ಎಸ್ ವಸತಿ ವಿಜ್ಞಾನ ಕಾಲೇಜಿಗೆ ಅರ್ಜಿ ಆಹ್ವಾನ


ಕೊಪ್ಪಳ, 9 ಮೇ (ಹಿ.ಸ):

ಆ್ಯಂಕರ್: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರೇಸಿಂದೋಗಿ ಮತ್ತು ಗಂಗಾವತಿ ತಾಲೂಕಿನ ಜಮಾಪುರದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿಗೆ (ಪಿಸಿಎಮ್ಬಿ ಮತ್ತು ಪಿಸಿಎಮ್ಸಿಎಸ್) 10 ನೇ ತರಗತಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಮೆರಿಟ್ ಹಾಗೂ ಸರ್ಕಾರದ ಮೀಸಲಾತಿ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ, ಹಾಗೂ ಇನ್ನಿತರ ಸಾಮಾಗ್ರಿಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುವುದು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. 2024-25ನೇ ಸಾಲಿನ ಪ್ರಥಮ ಪಿಯುಸಿಗೆ 80 ವಿದ್ಯಾರ್ಥಿಗಳಿಗೆ(ಪಿಸಿಎಮ್ಬಿ ಮತ್ತು ಪಿಸಿಎಮ್ಸಿ ವಿಭಾಗಕ್ಕೆ) ಪ್ರವೇಶ ನೀಡಲಾಗುವುದು. ಶೇ.50 ಸ್ಥಾನಗಳು ವಿದ್ಯಾರ್ಥಿನಿಯರಿಗೆ ಮೀಸಲು. ಮೀಸಲಾತಿ ಬಯಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯದ ಮಿತಿ ಪ.ಜಾತಿ ಮತ್ತು ಪ.ವರ್ಗದ, ಹಿಂದುಳಿದ ವರ್ಗದ ಪ್ರವರ್ಗ-1 ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯದ ಮಿತಿ ರೂ.2,50,000,/- ಹಾಗೂ ಹಿಂದುಳಿದ ವರ್ಗ 2ಎ, 2ಬಿ, 3ಎ, 3ಬಿ ಗುಂಪಿಗೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯ ಮಿತಿ ರೂ.1,00,000/- ಗಳು ಇರುತ್ತದೆ.

ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವ ಕ್ರೈಸ್ತ್ನ ಯಾವುದೇ ವಸತಿ ಶಾಲೆ/ಸರ್ಕಾರಿ/ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಲ್ಲಿ 10ನೇ ತರಗತಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ಸಂಬಂಧಿಸಿದ ಶಾಲೆಯಿಂದ ಸ್ಯಾಟ್ಸ್ ಸಂಖ್ಯೆಯನ್ನು ಪಡೆದು ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳ ಸಹಿತ ತಮಗೆ ಹತ್ತಿರವಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಯಾವುದೇ ವಸತಿ ಶಾಲೆ/ಕಾಲೇಜಿನ ಪ್ರಾಂಶುಪಾಲರ ಮೂಲಕ ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇರವಾಗಿ ಅಭ್ಯರ್ಥಿಯೇ ಯಾವುದಾದರೂ ಸ್ಥಳದಿಂದ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಮೇ 11 ರಿಂದ 16 ರವರೆಗೆ ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶರಣಗೌಡ-ಪ್ರಾಚಾರ್ಯರು ಮತ್ತು ಜಿಲ್ಲಾ ಸಮನ್ವಾಧಿಕಾರಿಗಳು ಕೊಪ್ಪಳ(7411999371), ಉಮೇಶ ಮಾಲಿಪಾಟೀಲ್, ಪ್ರಾಚಾರ್ಯರು ಮೊ.ದೇ.ಪ.ಪೂ.ವ.ವಿ ಕಾಲೇಜು ಜಮಾಪುರ ತಾ||ಗಂಗಾವತಿ ಜಿ|| ಕೊಪ್ಪಳ.(9743141876), ಪರಶುರಾಮ ದ್ವಿ.ದ.ಸಹಾಯಕ (9019531301), ಅಶೋಕ ಪೋಲಿಸ್ ಪಾಟೀಲ್ ದ್ವಿ.ದ.ಸಹಾಯಕ (9986586554) ಅಥವಾ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.


 rajesh pande