ಹಾಲವರ್ತಿ ಗ್ರಾ.ಪಂ.ಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಚತಾ ಶ್ರಮದಾನ
ಕೊಪ್ಪಳ, 9 ಮೇ (ಹಿ.ಸ): ಆ್ಯಂಕರ್: ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಚ್ಚತೆಯ ಪ್ರಜ್ಞೆ ಹೊಂದಿರುವುದು ಅವಶ್ಯಕ
ಹಾಲವರ್ತಿ ಗ್ರಾ.ಪಂ.ಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಚತಾ ಶ್ರಮದಾನ


ಹಾಲವರ್ತಿ ಗ್ರಾ.ಪಂ.ಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಚತಾ ಶ್ರಮದಾನ


ಹಾಲವರ್ತಿ ಗ್ರಾ.ಪಂ.ಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಚತಾ ಶ್ರಮದಾನ


ಕೊಪ್ಪಳ, 9 ಮೇ (ಹಿ.ಸ):

ಆ್ಯಂಕರ್: ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಚ್ಚತೆಯ ಪ್ರಜ್ಞೆ ಹೊಂದಿರುವುದು ಅವಶ್ಯಕ ಎಂದು ಜಿಲ್ಲಾ ಪಂಚಾಯಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದ್ದಾರೆ.

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯತಿಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೆಳವಿನಾಳ ಚಿಕ್ಕ ಗ್ರಾಮವಾಗಿದ್ದು ಈಗಾಗಲೇ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲಾ ಕುಟುಂಬಗಳಿಗೆ ಇಂಗು ಗುಂಡಿ ನಿರ್ಮಿಸಲಾಗಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್, ಪೇಪರ್, ಒಣಕಸ ಸಂಗ್ರಹಿಸಲು ಮನೆಯ ಮುಂದೆ ಕಂಬಕ್ಕೆ ಹಾಕಲು ಬಿದಿರಿನ ಬುಟ್ಟಿಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಎಲ್ಲೂ ಕೂಡಾ ಕಸವನ್ನು ಹಾಕಬಾರದು.

2022-23ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಇಂಗು ಗುಂಡಿ ನಿರ್ಮಿಸಿ ರಾಜ್ಯಕ್ಕೆ ಮಾದರಿಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಗ್ರಾಮದಲ್ಲಿ ಅನೈರ್ಮಲ್ಯ ಉಂಟಾಗುತ್ತದೆ. ಇದರಿಂದ ಗ್ರಾಮದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮನೆಯಿಂದ ಬಂದ ಹಸಿ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾಗಿರುವುದರಿಂದ ಪ್ರತಿ ಮನೆಗೆ ಗ್ರಾಮ ಪಂಚಾಯತಿಯಿಂದ ಕಾಂಪೆÇೀಸ್ಟ್ ಪಿಟ್ ನಿರ್ಮಿಸಲಾಗುವುದು ಎಂದು ತಿಳಿಸಿದ ಅವರು ಈ ಬಗ್ಗೆ ಸೂಕ್ತ ಕ್ರಮವಹಿಸಲು ಗ್ರಾಮ ಪಂಚಾಯತಿಯವರಿಗೆ ಸೂಕ್ತ ನಿರ್ದೇಶನ ನೀಡಿದರು.

ಚರಂಡಿಯಲ್ಲಿನ ಕಸವನ್ನು ಎತ್ತಿ ಹಾಕಿದ ಸಿಇಒ:- ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಪ್ಲಾಸ್ಟಿಕ್, ಪೇಪರಗಳು ತುಂಬಿದ್ದನ್ನು ನೋಡಿದ ಜಿಲ್ಲಾ ಪಂಚಾಯತಿಯ ಸಿಇಒ ತಾವೇ ಸ್ವತಃ ಸಲಾಕೆಯನ್ನು ಹಿಡಿದು ಚರಂಡಿಯಲ್ಲಿದ್ದ ಪೇಪರ್ಗಳು, ಪ್ಲಾಸ್ಟಿಕ್ ಅನ್ನು ಸಲಾಕೆಯಿಂದ ಎತ್ತಿ ಹಾಕಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು.

ಅಂಗನವಾಡಿ ಮಕ್ಕಳಿಗೆ ಕೈ ತೊಳೆಯುವ ಕುರಿತು ಪ್ರಾತ್ಯಕ್ಷಿಕೆ:- ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರತಿನಿತ್ಯ ಊಟದ ಮುಂಚೆ ಕೈ ತೊಳೆಯುವ ವಿಧಾನ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಿ ಜಿಲ್ಲಾ ಪಂಚಾಯತಿಯ ಎಸ್ಬಿಎಂ ಸಮಾಲೋಚಕಿ ಬಸಮ್ಮ ಹುಡೇದ ಅವರು ಮಾಹಿತಿ ನೀಡಿದರು. ನಂತರ ಕಾಂಪೆÇೀಸ್ಟ್ ಪಿಟ್ ಸಗಣಿ, ಬೆಲ್ಲ ಮಿಶ್ರಣ ಮಾಡಿಕೊಂಡು ಹಸಿ ಕಸವನ್ನು ನಿರ್ವಹಣೆ ಮಾಡುವುದರ ಕುರಿತು ವಿಧಾನ ತಿಳಿಸಲಾಯಿತು. ಜೆಜೆಎಂ ಕಾಮಗಾರಿಯಿಂದ ನೀರು ಸರಬರಾಜು ಆಗುತ್ತಿರುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಸ್ವಚ್ಛತಾ ಶ್ರಮದಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೊಪ್ಪಳ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು, ಸ್ವಚ್ಛತೆ ಎನ್ನುವ ಪರಿಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕೆಂದರು. ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ನಂತರ ಹಾಲವರ್ತಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ತಾಲೂಕ ಮಟ್ಟದ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಿದರು. ಗ್ರಾಮದಲ್ಲಿ ಶಾಲಾಭಿವೃದ್ದಿ ಕಾಮಗಾರಿ, ಜೆಜೆಎಂ ಕಾಮಗಾರಿ, ಅಂಗನವಾಡಿ ಕೇಂದ್ರಕ್ಕೆ ಭೇಟಿ ತೋಟಗಾರಿಕೆ ಇಲಾಖೆ ಕಾಮಗಾರಿ ಕುರಿತು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಹೇಶ ಶಾಸ್ತ್ರಿ, ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಮಹೇಶ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಲಾಸ್ ಬೋಸ್ಲೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಯ ಎಸ್ಬಿಎಂ, ಮಹಾತ್ಮ ಗಾಂಧಿ ನರೇಗಾ, ಸಂಜೀವಿನಿ ಯೋಜನೆಗಳ ಸಮಾಲೋಚಕರು, ಸಂಯೋಜಕರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.


 rajesh pande