ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಲು ಸುನೀಲ್ ಹೊಸಮನಿ ಕರೆ
ಕೋಲಾರ, ೨೪ ಏಪ್ರಿಲ್ (ಹಿ.ಸ) : ಆ್ಯಂಕರ್ : ಮಕ್ಕಳಲ್ಲಿ ಮೋಬೈಲ್ ಗೀಳು ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳು ಮಾನಸಿಕ
ಕೋಲಾರದಲ್ಲಿ ಈನೆಲ ಈಜಲ ಸಂಸ್ಥೆಯ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಹೊಸಮನಿ ಪ್ರಮಾಣ ಪತ್ರಗಳನ್ನು ವಿತರಿಸಿದರು.


ಕೋಲಾರ, ೨೪ ಏಪ್ರಿಲ್ (ಹಿ.ಸ) :

ಆ್ಯಂಕರ್ : ಮಕ್ಕಳಲ್ಲಿ ಮೋಬೈಲ್ ಗೀಳು ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳು ಮಾನಸಿಕ ಕಿನ್ನತೆಗೆ ಒಳಗಾಗುತ್ತಿದ್ದಾರೆ. ಪೋಷಕರು ಮೊಬೈಲ್ಗಳಿಂದ ದೂರವಿದ್ದರೆ ಮಕ್ಕಳೂ ಸಹ ದೂರ ಇರುತ್ತಾರೆ. ಮಕ್ಕಳಲ್ಲಿ ಏನು ಬಿತ್ತುತ್ತೇವೆಯೋ ಅದು ಸಮಾಜದಲ್ಲಿ ಪ್ರತಿಪಾಲಿತವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್. ಹೊಸಮನಿ ರವರು ಕರೆ ನೀಡಿದರು.

ಕೋಲಾರ ನಗರ ಹಾರೋಹಳ್ಳಿಯ ಗಮನ ಮಹಿಳಾ ಸಮೂಹದ ಮುಂಭಾಗದಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಮತ್ತು ಗಮನ ಮಹಿಳಾ ಸಮೂಹ ಕೋಲಾರ ಇವರ ಸಹಯೋಗದಲ್ಲಿ ಆಯೋಸಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬಾಲ್ಯದಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಚುರುಕುಗೊಳ್ಳುತ್ತಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಸುಮಾರು ೧೦ ಹಾಡುಗಳನ್ನು ಕಂಠಪಾಟ ಮಾಡಿದ್ದು, ಜೊತೆಗೆ ಕೋಲಾಟ, ನೃತ್ಯ, ನಾಟಕ ಕಲಿತಿರುವುದು ಶ್ಲಾಘನೀಯ. ಬೇಸಿಗೆ ರಜೆಗಳನ್ನು ಈ ರೀತಿಯ ಶಿಬಿರಗಳನ್ನು ಆಯೋಜನೆ ಮಾಡಿರುವುದು ಉತ್ತಮ ಕಾರ್ಯ ಎಂದರು.

ಸAವಾದ ಸಂಸ್ಥೆಯ ವಿಜಯಕುಮಾರ್ ಮಾತನಾಡಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸೃಷ್ಟಿಸಲು ಹಲವು ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ ಅದರಲ್ಲಿ ಈ ಮೇಲೆ ತಿಳಿಸಿದ ಸಂಸ್ಥೆಗಳು ಮುಖ್ಯವಾಗಿವೆ. ಹಲವು ಕಡೆಗಳಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತವೆ ಆದರೆ ಅವುಗಳು ಶುಲ್ಕದ ಮೂಲಕ ನಡೆಯುವಂತವು. ಇಲ್ಲಿ ಬಡ ಸಮುದಾಯದ ಮಕ್ಕಳಿಗೆ ಶುಲ್ಕ ತುಂಬಲು ಆಗದೆ ಅವರು ಇಂತಹ ಪ್ರಕ್ರಿಯೆಗಳಿಂದ ಹೊರಗೆ ಉಳಿಯಬಾರದೆಂದು ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ಮತ್ತು ಅವರ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ಹಾಗಾಗಿ ಇಂತಹ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕಳಿಸಿಕೊಡಿ ಎಂದು ಮನವಿ ಮಾಡಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಗುಂಡಪ್ಪ ಮಾತನಾಡಿ ವಿದ್ಯಾರ್ಥಿಗಳು ಕಲಿಯುವ ಪ್ರತಿ ಹಾಡು, ನಾಟಕ ಬಗ್ಗೆ ಮಕ್ಕಳು ಯೋಚಿಸುತ್ತಾರೆ ಮತ್ತು ಇದು ಯಾಕೆ ಎಂದು ಚಿಂತಿಸುತ್ತಾರೆ. ಮಕ್ಕಳು ಬೇಗ ಗ್ರಹಿಸುವ ಅನುಕರಿಸುವ ಶಕ್ತಿ ಇರುತ್ತದೆ. ಆದ್ದರಿಂದ ನಾವು ಸಕಾರಾತ್ಮಕ ಬದಲಾವಣೆ ತರಲು ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟಲು ಈ ನಾಡನ್ನು ಸುರಕ್ಷಿತ ಮತ್ತು ಭ್ರಾತೃತ್ವ ಭಾವನೆಯನ್ನು ತರಲು ಇದು ಸಹಾಯಕವಾಗಿದೆ ಎಂದರು.

ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಚಿಂತಕ ಡಾ.ಶಿವಪ್ಪ ಅರಿವು, ಅರಳು ಸಾಹಿತ್ಯ ಪ್ರಶಸ್ತಿ ವಿಜೇತ ಸಾಹಿತಿ ವಿ.ಲಕ್ಷö್ಮಯ್ಯ, ಗಮನ ಶಾಂತಮ್ಮ, ಜನಪದ ಗಾಯಕ ಬಿ.ವೆಂಕಟಾಚಲಪತಿ, ಗಮನ ಲಕ್ಷಿö್ಮ, ಮಾಜಿ ನಗರಸಭಾ ಸದಸ್ಯ ನಾರಾಯಣಪ್ಪ, ಡಾ.ಶರಣಪ್ಪ ಗಬ್ಬೂರು, ಗಣೇಶಪ್ಪ.ಎನ್ ಮುಂತಾದವರು ಭಾಗವಹಿಸಿದ್ದರು.

ಚಿತ್ರ : ಕೋಲಾರದಲ್ಲಿ ಈನೆಲ ಈಜಲ ಸಂಸ್ಥೆಯ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಹೊಸಮನಿ ಪ್ರಮಾಣ ಪತ್ರಗಳನ್ನು ವಿತರಿಸಿದರು.


 rajesh pande